ಬೆಳಗಾವಿ – ಬೆಳಗಾವಿಯಲ್ಲಿ ಎಂಇಎಸ್, ಶಿವಸೇನೆ ಪುಂಡಾಟದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ – ಮಹಾರಾಷ್ಟ್ರ ಮಧ್ಯ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಕರ್ನಾಟಕದಿಂದ ಯಾವುದೇ ಬಸ್ ಮಹಾರಾಷ್ಟ್ರ ಪ್ರವೇಶಿಸುತ್ತಿಲ್ಲ. ಹಾಗೆಯೇ ಮಹಾರಾಷ್ಟ್ರ ಬಸ್ ಗಳೂ ಕರ್ನಾಟಕದೊಳಗೆ ಪ್ರವೇಶಿಸುತ್ತಿಲ್ಲ. ಎರಡೂ ರಾಜ್ಯಗಳ ಬಸ್ ನಿಪ್ಪಾಣಿ ಗಡಿವರೆಗೆ ಬಂದು ಹಿಂದಿರುಗುತ್ತಿವೆ.
ಇದರಿಂದಾಗಿ ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡರು ಬಸ್ ಗಳಿಗೆ ಕಲ್ಲು ತೂರಾಟ ಮತ್ತಿತರ ಹಿಂಸಾಚಾರ ಕೃತ್ಯ ನಡೆಸಬಹುದೆನ್ನುವ ಹಿನ್ನೆಲೆಯಲ್ಲಿ ಬಸ್ ಸಂಚಾರ ನಿಲ್ಲಿಸಲಾಗಿದೆ ಎಂದು ಕೆಎಸ್ ಆರ್ ಟಿಸಿ ಮೂಲಗಳು ಪ್ರಗತಿವಾಹಿನಿಗೆ ತಿಳಿಸಿವೆ.
ಖಾಸಗಿ ವಾಹನಗಳ ಸಂಚಾರವೂ ತೀರಾ ವಿರಳವಾಗಿವೆ.