Breaking News

ನೈಜೀರಿಯಾದಿಂದ ಬೆಳಗಾವಿಗೆ ಬಂದಿರುವ ಓರ್ವ ವ್ಯಕ್ತಿಯಲ್ಲಿ ಒಮಿಕ್ರಾನ್ ಪತ್ತೆ

Spread the love

ಬೆಳಗಾವಿ – ನೈಜೀರಿಯಾದಿಂದ ಬೆಳಗಾವಿಗೆ ಬಂದಿರುವ ಓರ್ವ ವ್ಯಕ್ತಿಯಲ್ಲಿ ಒಮಿಕ್ರಾನ್ ಪತ್ತೆಯಾಗಿದೆ.

53 ವರ್ಷದ ವ್ಯಕ್ತಿ ನೈಜೀರಿಯಾದಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಬೆಳಗಾವಿಗೆ ಪ್ರಯಾಣಿಸಿದ್ದಾರೆ. ನೈಜೀರಿಯಾದಲ್ಲಿ ಪರೀಕ್ಷೆ ನಡೆಸಿದಾಗ ಅವರಿಗೆ ನೆಗೆಟಿವ್ ಬಂದಿದೆ. ಆದರೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿದಾಗ ಪಾಸಿಟಿವ್ ಬಂದಿದೆ.

ಬೆಂಗಳೂರಿನಲ್ಲಿ ಪಾಸಿಟಿವ್ ಪತ್ತೆಯಾದರೂ ಆ ವ್ಯಕ್ತಿಗೆ ಬೆಳಗಾವಿಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದೇಕೆ ಎನ್ನುವುದೇ ಈಗ ವಿವಾದಕ್ಕೊಳಗಾಗಿದೆ. ಅಲ್ಲಿಯೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಬದಲು ಹೋಮ್ ಐಸೋಲೇಶನ್ ಸಲಹೆ ನೀಡಿ ಬೆಳಗಾವಿಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ ಎನ್ನುವ ಮಾಹಿತಿ ಬಂದಿದೆ. ಈ ಬಗ್ಗೆ ಾರೋಗ್ಯ ಇಲಾಖೆ ಇನ್ನಷ್ಟೆ ಸ್ಪಷ್ಟನೆ ನೀಡಬೇಕಿದೆ.

ಬೆಂಗಳೂರಿನಿಂದ ಅವರು ಯಾವ ವಿಮಾನದಲ್ಲಿ ಪ್ರಯಾಣಿಸಿದ್ದಾರೆ? ಅವರ ಸಹಪ್ರಯಾಣಿಕರೆಷ್ಟು? ಅವರನ್ನೆಲ್ಲ ಪರೀಕ್ಷಿಸಲಾಗಿದೆಯೇ? ಖಾಸಗಿ ವಾಹನದಲ್ಲಿ ಪ್ರಯಾಣಿಸಿದ್ದರೆ ಅದರ ವಿವರಗಳೇನು? -ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಬೇಕಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಶಶಿಕಾಂತ ಮುನ್ಯಾಳ ಪ್ರಕಾರ, ಆ ವ್ಯಕ್ತಿಗೆ ಕೊರೋನಾ ದೃಢಪಟ್ಟಿದೆ. ಆದರೆ ಒಮಿಕ್ರಾನ್ ಖಚಿತಪಡಿಸಿಕೊಳ್ಳಲು ಟೆಸ್ಟ್ ಗೆ ಕಲಿಸಲಾಗಿದೆ. ಏನೇ ಆದರೂ ಅವರನ್ನು ಪತ್ತೆಯಾದ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೆ ಇಷ್ಟೊಂದು ಆತಂಕಕ್ಕೆ ಕಾರಣವಾಗುವ ಅವಕಾಶವಿರಲಿಲ್ಲ. ಈಗ ಬೆಳಗಾವಿಯಲ್ಲೂ ದೊಡ್ಡ ಆತಂಕ ಹುಟ್ಟುವಂತಾಗಿದೆ.

ಇವರ ಜೊತೆಗೆ ಗುರುವಾರ ರಾಜ್ಯದಲ್ಲಿ ಇನ್ನೂ ನಾಲ್ವರಿಗೆ ಒಮಿಕ್ರಾನ್ ಪತ್ತೆಯಾಗಿದೆ.


Spread the love

About Laxminews 24x7

Check Also

ಮಾಲವಿ ಜಲಾಶಯದ ಮಣ್ಣಿನ ಗೋಡೆ ಒಡೆದು ನೀರು ಪೋಲು: ಅಧಿಕಾರಿಗಳ ವಿರುದ್ದ ಜನರ ಆಕ್ರೋಶ

Spread the loveವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದ ಹೊರಭಾಗದಲ್ಲಿರುವ ಮಾಲವಿ ಜಲಾಶಯದ ಮಣ್ಣಿನ ಗೋಡೆ ಒಡೆದು ಅಪಾರ ಪ್ರಮಾಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ