Breaking News
????????????????????????????????????

ಗೋಕಾಕ: ಇಲ್ಲಿಯ ಟಿಎಪಿಸಿಎಮ್‍ಎಸ್‍ನ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅಶೋಕ ನಾಯಿಕ ಅವರು ಮಾತನಾಡುತ್ತಿರುವುದು.

Spread the love

ಗೋಕಾಕ: ಇಲ್ಲಿಯ ಟಿಎಪಿಸಿಎಮ್‍ಎಸ್ ಪ್ರಸಕ್ತ ಸಾಲಿನಲ್ಲಿ 39.17 ಕೋಟಿ ರೂಗಳ ವಹಿವಾಟು ನಡೆಸಿ 60.53 ಲಕ್ಷ ಲಾಭವನ್ನು ಗಳಿಸಿ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಅಶೋಕ ನಾಯಿಕ ಹೇಳಿದರು.

ಗುರುವಾರದಂದು ನಗರದ ಸಂಘದ ಸಭಾ ಭವನದಲ್ಲಿ ಜರುಗಿದ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸಂಘವು ಸದಸ್ಯರಿಗೆ ಹಲವಾರು ಸೌಲಭ್ಯಗಳನ್ನು ನೀಡಿ ಅವರ ಆರ್ಥಿಕ ಅಭಿವೃದ್ದಿಗೆ ಶ್ರಮಿಸುತ್ತಿದ್ದು ಇನ್ನೂ ಮುಂದೆಯೂ ಸಂಘದ ಹಿತೈಸಿಗಳು ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಿಠ್ಠಲ ಪಾಟೀಲ, ನಿರ್ದೇಶಕರುಗಳಾದ ಈಶ್ವರಪ್ಪ ಬೆಳಗಲಿ, ಕೆಂಚಪ್ಪ ಮಂಟೂರ, ಬಸನಗೌಡ ಪಾಟೀಲ(ಮೆಳವಂಕಿ) ಗಂಗವ್ವ ಜೈನ, ಲುಬಾನಾ ದೇಸಾಯಿ, ಗುರುನಾಥ ಕಂಕಣವಾಡಿ, ವೆಂಕನಗೌಡ ಪಾಟೀಲ, ಪ್ರಭಾಕರ ಬಂಗೇನ್ನವರ, ಸುರೇಶ ಗುಡ್ಡಾಕಾರ, ಶಿವನಗೌಡ ಪಾಟೀಲ, ವ್ಯವಸ್ಥಾಪಕ ಎಚ್.ವಾಯ್.ಐನಾಪೂರ ಮುಖಂಡರಾದ ಬಸನಗೌಡ ಪಾಟೀಲ(ಕುಲಗೋಡ), ವೆಂಕಣ್ಣ ಚನ್ನಾಳ, ಪ್ರಶಾಂತ ವಂಟಗೋಡಿ, ಭೀಮಶಿ ಪೂಜೇರ, ಶ್ರೀಪತಿ ಘಣಿ, ಸುಭಾಶ ವಂಟಗೋಡಿ, ಯಲ್ಲಪ್ಪ ಪರುಶೆಟ್ಟಿ ಇದ್ದರು.

 

 

 

 


Spread the love

About Laxminews 24x7

Check Also

ಬೆಳಗಾವಿಯ ಡಾಕ್ಟರ್ ಶಿವಸ್ವಾಮಿ ಮುಡಿಗುಂಡ ಅವರಿಗೆ ‘ಕಾಚ್ ಸಮುದಾಯ ಚಾಂಪಿಯನ್ ಪ್ರಶಸ್ತಿ’ ಪ್ರದಾನ!

Spread the love ಬೆಳಗಾವಿಯ ಡಾಕ್ಟರ್ ಶಿವಸ್ವಾಮಿ ಮುಡಿಗುಂಡ ಅವರಿಗೆ ‘ಕಾಚ್ ಸಮುದಾಯ ಚಾಂಪಿಯನ್ ಪ್ರಶಸ್ತಿ’ ಪ್ರದಾನ! ಸಚಿವ ಶರಣ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ