ಹುಬ್ಬಳ್ಳಿ: ರಾಯಚೂರಿನ ಸಿಂದಗಿ ಹಾಗೂ ಕಲಬುರಗಿಯ ಬಡದಲ್ ಹಳ್ಳಿಯ ನಡುವೆ 177 ಕಿಮೀ ಉದ್ಧದ ಗ್ರೀನ್ಫೀಲ್ಡ್ ಹೆದ್ದಾರಿ ನಿರ್ಮಾಣವಾಗಲಿದ್ದು, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಭಾರತ್ ಮಾಲಾ ಯೋಜನೆಯ ಪರಿಯೋಜನೆಯಡಿ ಆರು ಪಥದ ಹೆದ್ದಾರಿ ನಿರ್ಮಾಣ ಆಗಲಿದೆ.
ಉತ್ತರ ಕರ್ನಾಟಕದಲ್ಲಿ ನಿರ್ಮಾಣವಾಗಲಿರುವ ಮೊದಲ ಆರು ಪಥದ ರಾಷ್ಟ್ರೀಯ ಹೆದ್ದಾರಿ ಆಗಲಿದ್ದು, ಕೇಂದ್ರ ಸರ್ಕಾರ ಯೋಜನೆಗಾಗಿ ಒಂದು ಕಿಮೀಗೆ ಸುಮಾರು 25 ಕೋಟಿ ರೂಪಾಯಿ ವ್ಯಯ ಮಾಡಲಿದೆ.
ರಾಷ್ಟ್ರೀಯ ಮಾಧ್ಯಮದ ವರದಿಯ ಅನ್ವಯ, ಕೇಂದ್ರ ಸರ್ಕಾರ ನಾಲ್ಕು ಪ್ಯಾಕೇಜ್ಗಳಲ್ಲಿ 203.1 ಕಿಮೀ ಉದ್ದದ 6 ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಟೆಂಡರ್ ಅನ್ನು ಫೈನಲ್ ಮಾಡಿದೆ. ಇದು ಮಹಾರಾಷ್ಟ್ರದ ಅಕ್ಕಲಕೋಟದಿಂದ ರಾಯಚೂರಿನ ಸಿಂದಗಿ ನಡುವೆ ನಿರ್ಮಾಣ ಆಗಲಿದೆ. ನಾಲ್ಕು ಪ್ಯಾಕೇಜ್ಗಳಲ್ಲಿ 2,3,4 ಪ್ಯಾಕೇಜ್ಗಳು 177 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಲಿದ್ದು, ಇದರಲ್ಲಿ ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಹೆದ್ದಾರಿ ನಿರ್ಮಾಣ ಕಾರ್ಯ ನಡೆಯಲಿದೆ. ಮೊದಲ ಪ್ಯಾಕೇಜ್ ಸಂಪೂರ್ಣವಾಗಿ ಮಹಾರಾಷ್ಟ್ರದಲ್ಲಿ ನಿರ್ಮಾಣವಾಗಲಿದೆ.
Laxmi News 24×7