Breaking News

ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಮುಹೂರ್ತ ಫಿಕ್ಸ್‌: ಸೋಮವಾರ ಸದನಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ, ಗೃಹ ಸಚಿವ ಅರಗ ಜ್ಞಾನೇಂದ್ರ

Spread the love

ಬೆಳಗಾವಿ: ಸೋಮವಾರ ಸದನಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಯಾಗಲಿದೆ ಎನ್ನಲಾಗಿದೆ, ಈ ಬಗ್ಗೆ ಇಂದು ಸಿಎಂ ಗೃಹ ಸಚಿವ ಸಭೆ ನಡೆಸಿದ್ದು, ಸೋಮವಾರ ಸೋಮವಾರ ಸದನಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಯಾಗಲಿದೆ ಎನ್ನಲಾಗಿದೆ.

ಈ ನಡುವೆ ಕರಡಿನ ಅಂತಿಮ ಅಂಶಗಳ ಬಗ್ಗೆ, ಕಾನೂನು ತಜ್ಞರ ಸೇರಿದಂತೆ ಸಂಬಂಧಪಟ್ಟವರ ಜೊತೆಗೆ ಚರ್ಚೆ ನಡೆಸಲಾಗಿದೆಯಂತೆ.

ಮೂಸೂದೆಯನ್ನು ಕಾನೂನಿನ ಅಡಿಯಲ್ಲಿ ತರುವುದಾಗಿ, ರಾಜ್ಯ ಸರ್ಕಾರ ಹೇಳಿದ್ದು, ಬಲವಂತದ ಮತಾಂತರ ವಿರುದ್ದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಜಿಲ್ಲಾಧಿಕಾರಿಗಳ ಅಂತಿಮ ಅನುಮತಿ ಬಳಿಕ ಮತಾಂತರಕ್ಕೆ ಅವಕಾಶವನ್ನು ನೀಡಲಾಗುವುದುದ ಎನ್ನಲಾಗಿದೆ.

ಈ ನಡುವೆ ಸಭಾಪತಿ ಆದೇಶ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ವಿಧಾನ ಪರಿಷತ್‌ನ 14 ಮಂದಿ ಕಾಂಗ್ರೆಸ್‌ ಸದಸ್ಯರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ. ಸಭಾಪತಿ ಬಸವರಾಜ ಹೊರಟ್ಟಿಯವರು ಈ ಆದೇಶವನ್ನು ಹೊರಟ್ಟಿಯವರು ನೀಡಿದ್ದಾರೆ. ಕಾಂಗ್ರೆಸ್‌ ಸದಸ್ಯರು ಬಾವಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದರು, ಹೀಗಾಗಿ ಸದಸ್ಯರ ಧರಣಿ ನಿರತ ಹಿನ್ನಲೆಯಲ್ಲಿ ಈ ಕ್ರಮವನ್ನು ತೆಗದುಕೊಂಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಸದಸ್ಯ ಯುಬಿ ವೆಂಕಟೇಶ್‌ಗೆ ಸಭಾಪತಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ವೀಣಾ ಆಚ್ಚಯ್ಯ, ಸಿಎಂ ಇಬ್ರಾಹಿಂ, ಎಸ್‌.ಆರ್‌ ಪಾಟೀಲ್‌. ಪಿ.ಆರ್ ರಮೇಶ್‌, ಪ್ರತಾಪ್‌ ಚಂದ್ರ ಶೆಟ್ಟಿ, ನಾರಾಯಣ ಸ್ವಾಮಿ, ಯು.ಬಿ ವೆಂಕಟೇಶ್‌, ನಜೀರ್‌ ಆಹ್ಮದ್‌, ಸೇರಿ ಒಟ್ಟು 14 ಮಂದಿಯನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಿ ಸಭಾಪತಿ ಆದೇಶವನ್ನು ಹೊರಡಿಸಿದ್ದಾರೆ.

ಅಡಳಿತ ರೂಢ ಸಚಿವರೊಬ್ಬರ ಮೇಲೆ ಜಮೀನಿನ ವ್ಯಾಜ್ಯಕ್ಕೆ ಸಂಬಂಧಪಟ್ಟಂತೆ ಎಫ್‌ಐಆರ್‌ ದಾಖಲಾಗಿದೆ ಅಂತ ಚರ್ಚೆ ನಡೆಸಬೇಕು ಅಂತ ಕಾಂಗ್ರೆಸ್‌ ಸಭಾಪತಿಯವರ ಬಳಿ ಮನವಿ ಮಾಡಿದ್ದರು, ಆದರೆ ಇದಕ್ಕೆ ಸಭಾಪತಿಗಳು ಒಪ್ಪಿಗೆ ನೀಡಲಿಲ್ಲ, ಇದೇ ವೇಳೆ ಕಾಂಗ್ರೆಸ್‌ನ ಸದಸ್ಯರು ಸದನದ ಬಾವಿಗೆ ಇಳಿದ ಪ್ರತಿಭಟನೆ ನಡೆಸಿದರು, ಇನ್ನೂ ಸಭಾಪತಿ ಅಮಾನತು ಮಾಡಿದ್ರು ಕೂಡ ಇನ್ನೂ ಅಮಾನತುಗೊಂಡಿರುವ ಸದಸ್ಯರು ಬಾವಿಯಲ್ಲಿ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ