Breaking News

ಸಭಾಪತಿಗಳ ಆದೇಶ ಉಲ್ಲಂಘನೆ : ವಿಪಕ್ಷ ನಾಯಕ ಎಸ್‌.ಆರ್‌ ಪಾಟೀಲ್‌ ಸೇರಿ ವಿಧಾನಪರಿಷತ್‌ ʼ14 ಸದಸ್ಯರುʼ ಅಮಾನತು

Spread the love

ಬೆಳಗಾವಿ : ಸಭಾಪತಿಗಳ ಆದೇಶ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಎಸ್‌.ಆರ್‌ ಪಾಟೀಲ್‌ ಸೇರಿ ವಿಧಾನಪರಿಷತ್‌ನ 14 ಸದಸ್ಯರನ್ನ ಅಮಾನತುಗೊಳಿಸಲಾಗಿದೆ.

ಸದನ ಬಾವಿಗೆ ಇಳಿದು ಪ್ರತಿಭಟನೆ ಮಾಡದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವ್ರು ವಿಪಕ್ಷ ನಾಯಕರಿಗೆ ಮನವಿ ಮಾಡಿದ್ರು.

ಆದ್ರೆ, ಸಭಾಪತಿಗಳ ಮನವಿಗೆ ಸ್ಪಂದಿಸದ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ಮುಂದುವರೆಸಿದ್ರು. ನಂತ್ರ ಸಭಾಪತಿ ಬಸವರಾಜ ಹೊರಟ್ಟಿ, ಸದನದ ಬಾವಿಗಿಳಿದು ಪ್ರತಿಭಟಿಸಿದ 14 ಸದಸ್ಯರನ್ನ ಒಂದು ದಿನದ ಮಟ್ಟಿಗೆ ಕಲಾಪದಿಂದ ಅಮಾನತುಗೊಳಿಸುವುದಾಗಿ ಆದೇಶ ಹೊರಡಿಸಿದ್ದಾರೆ.

ಅದ್ರಂತೆ, ವೀಣಾ ಆಚ್ಚಯ್ಯ, ಸಿಎಂ ಇಬ್ರಾಹಿಂ, ಎಸ್‌.ಆರ್‌ ಪಾಟೀಲ್‌. ಪಿ.ಆರ್ ರಮೇಶ್‌, ಪ್ರತಾಪ್‌ ಚಂದ್ರ ಶೆಟ್ಟಿ, ನಾರಾಯಣ ಸ್ವಾಮಿ, ಯು.ಬಿ ವೆಂಕಟೇಶ್‌, ನಜೀರ್‌ ಆಹ್ಮದ್‌, ಸೇರಿ ಒಟ್ಟು 14 ಮಂದಿಯನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಿ ಸಭಾಪತಿ ಆದೇಶವನ್ನು ಹೊರಡಿಸಿದ್ದಾರೆ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ