Breaking News

ಇಷ್ಟೊಂದು ಸಂಸದರು, ಶಾಸಕರು, ಸಚಿವರಿದ್ದರೂ ಬೆಳಗಾವಿಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಚರ್ಚೆ – ಮಾಜಿ ಸಿಎಂ B,S.Y.

Spread the love

ಬೆಳಗಾವಿ: ಇಷ್ಟೊಂದು ಸಂಸದರು, ಶಾಸಕರು, ಸಚಿವರಿದ್ದರೂ ಬೆಳಗಾವಿಯ ಪರಿಷತ್ ಚುನಾವಣೆಯಲ್ಲಿ ( Karnataka Council Election ) ಬಿಜೆಪಿ ಅಭ್ಯರ್ಥಿ ಸೋತಿದ್ದು ಹೇಗೆ ಎನ್ನುವುದೇ ಅಚ್ಚರಿ ಮೂಡಿಸಿದೆ. ಆ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂಬುದಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ( Ex CM BS Yediyurappa ) ತಿಳಿಸಿದ್ದಾರೆ.

 

ಈ ಬಗ್ಗೆ ಸುದ್ದಿಗಾರರೊಂದಿಗೆ ಇಂದು ಮಾತನಾಡಿದಂತ ಅವರು, ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿನ ಬಗ್ಗೆ ಪಾರಾಮರ್ಶೆ ನಡೆಸಲಾಗುತ್ತದೆ. ಸೋಲಿಗೆ ಕಾರಣವೇನು ಎನ್ನುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಯಾರು ಬೆಂಬಲಿಸಿದ್ರು, ಯಾರು ಬೆಂಬಲಿಸಲಿಲ್ಲ ಎನ್ನುವ ಬಗ್ಗೆಯೂ ಅಂತರೀಕ ಚರ್ಚೆ ನಡೆಯಲಿದೆ ಎಂದು ಹೇಳುವ ಮೂಲಕ ಬಿಜೆಪಿಯ ಆತಂರೀಕ ತನಿಖೆಯ ಬಗ್ಗೆ ಪ್ರಾಸಂಗಿಕವಾಗಿ ಸೂಚಿಸಿದ್ದಾರೆ.

ಮತ್ತೊಂದೆಡೆ ಬೆಳಗಾವಿಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ ಬಗ್ಗೆ ಮಾತನಾಡಿದಂತ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು, ಹಿರಿಯ ಪ್ರಮುಖ ನಾಯಕರು ನನಗೆ ಕರೆ ಮಾಡಿದ್ದರು.. ಹೀಗಾಗಿ ನಾನು ಏನೂ ಮಾತನಾಡೋದಿಲ್ಲ. ನಮ್ಮ ಪಕ್ಷದಲ್ಲಿ ಏನ್ ಆಗಿದೆ. ಏನ್ ಆಗ್ತಾ ಇದೆ ಎನ್ನುವ ಬಗ್ಗೆ ದೆಹಲಿಗೆ ಹೋದಾಗ ಹೇಳಿ ಬಂದಿದೆ. ನಮ್ಮ ಪಕ್ಷ ಸೋಲಬಾರದಾಗಿತ್ತು, ಸೋತಿದೆ ಎಂದರು.

ನಾನು ಇವತ್ತು ಬಹಳಷ್ಟು ಗಂಭೀರವಾದ ವಿಚಾರವನ್ನು ಹೇಳುವವನಿದ್ದೆ. ಆದ್ರೇ ಅನಿವಾರ್ಯವಾಗಿ ದೊಡ್ಡ ನಾಯಕರು ಮಾತನಾಡದಂತೆ ಸೂಚಿಸಿದ್ದಾರೆ. ಅದರಿಂದ ನಾನೇನು ಮಾತನಾಡೋದಿಲ್ಲ. ಬಿಜೆಪಿ ನಾಯಕನಾಗಿ ನಾನೇನು ಮಾತನಾಡೋದಿಲ್ಲ ಎಂದರು.

ನಾನು ಕಾಂಗ್ರೆಸ್ ಸೋಲಿಸೋದಕ್ಕೆ ಹಠಕ್ಕೆ ಬಿದ್ದಿದ್ದು ನಿಜ. ಆ ವಿಚಾರವನ್ನು ಇಲ್ಲಿ ಚರ್ಚೆ ಮಾಡೋದಿಲ್ಲ. ನಮ್ಮ ಪಕ್ಷದ ಸೋಲಿಗೆ ಕಾರಣವೇನು ಎನ್ನುವ ಬಗ್ಗೆ ಆಂತರೀಕ ಚರ್ಚೆ ನಡೆಸಲಾಗುತ್ತದೆ ಎಂದರು.

ಸಿದ್ಧರಾಮಯ್ಯಗೆ ಭಯ ಹುಟ್ಟಿದೆ. ಹಿಂದುಳಿದ ನಾಯಕರಿಗೆ ಈಗ ಭಯ ಕಾಡುತ್ತಿದೆ. ಸಿದ್ಧರಾಮಯ್ಯ ವೇಸ್ಟ್ ಬಾಡಿ, ತಗ್ಗಿಗೆ ಬೀಳೋ ಮನುಷ್ಯ. ಮುಂದಿನ ಚುನಾವಣೆಯಲ್ಲಿ ಅವನು ಎಲ್ಲೇ ನಿಂತರೂ ಸೋಲುತ್ತಾನೆ. ಅವನ ಬಗ್ಗೆ ಏನೂ ಮಾತನಾಡೋದಿಲ್ಲ ಎಂದು ಹೇಳಿದರು.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ