ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಉದುಪುಡಿಯ ಶಿವಸಾಗರ ಶುಗರ್ಸ್ ಆ್ಯಂಡ್ ಅಗ್ರೋ ಪ್ರೊಡಕ್ಟ್ ಕಂಪನಿಯ ಅಕ್ರಮ ವ್ಯವಹಾರಗಳ ಹಿನ್ನೆಲೆಯಲ್ಲಿ, ಕಾರ್ಖಾನೆಯ ಅಧ್ಯಕ್ಷ ರಾಜೇಂದ್ರ ಪಾಟೀಲ ಸೇರಿದಂತೆ ನಿರ್ದೇಶಕರು ಬೇಕಾಬಿಟ್ಟಿಯಾಗಿ, ನಕಲಿ ದಾಖಲೆ ಸೃಷ್ಟಿ ಮಾಡಿ, ಭಾರಿ ಅವವ್ಯಹಾರ ಮಾಡದ್ದಾರೆಂದು ಈಗ ಕಂಪನಿಯ ಮಾಜಿ ನಿರ್ದೇಶಕರು, ಆನಂದ ಕುಲಕರ್ಣಿ ಅವರು ಆರೋಪಿಸಿದ್ದಾರೆ
ನಗರದಲ್ಲಿ ಇಂದು ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಅವರು ರಾಜೇಂದ್ರ ಪಾಟೀಲ ಸೇರಿದಂತೆ ಏಳು ಜನರು ಶಿವಸಾಗರ ಶುಗರ್ಸ್ ಆ್ಯಂಡ್ ಅಗ್ರೋ ಪ್ರೊಡಕ್ಟ್ ಕಂಪನಿಗೆ 40 ಸಾವಿರದಷ್ಟು ಷೇರುದಾರರಿದ್ದು, ಇವರೆಲ್ಲರನ್ನು ನಿರ್ಲಕ್ಷಿಸಿ ಸರ್ವ ಸಾಧರಣ ಸಭೆ ಕರೆಯದೆ ಸರ್ವಾಧಿಕಾರದಿಂದ ವರ್ತಿಸಿದ್ದಾರಂತೆ, ಅಲ್ಲದೆ 2014ರ ಫೆ. 14 ರಂದು ನಕಲಿ ದಾಖಲೆ ಸೃಷ್ಟಿ ಮಾಡಿ 10 ಜನ ನಿರ್ದೇಶಕರನ್ನು ಏಕಾಏಕಿ ತೆಗೆದುಹಾಕಿದ್ದರು.