Breaking News

ಮಹಿಳೆ ಕೆಟಗರಿ ಅಲ್ಲ!: ಹೈಕೋರ್ಟ್‌

Spread the love

ಬೆಂಗಳೂರು : ‘ಮೀಸಲಾತಿ ವಿಷಯದಲ್ಲಿ ಮಹಿಳೆ ಮೀಸಲು ಕೆಟಗರಿ ಅಲ್ಲ, ಅದೊಂದು ಲಿಂಗಸೂಚಕ ಮಾತ್ರ’ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಶಿರಾ ನಗರಸಭೆಯ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ನವೆಂಬರ್ 25ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿದ ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸಿದೆ.

 

ಈ ಸಂಬಂಧ ಅಬ್ದುಲ್ಲಾ ಖಾನ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿ, ‘ಬಿಸಿಎ (ಮಹಿಳೆ) ಅಥವಾ ಸಾಮಾನ್ಯ (ಮಹಿಳೆ) ಎನ್ನುವುದು ಪ್ರತ್ಯೇಕ ಮೀಸಲು ಕೆಟಗರಿ. ಆದ್ದರಿಂದ, ಶಿರಾ ನಗರಸಭೆಯ ವಾರ್ಡ್ 19ರಲ್ಲಿ ಬಿಸಿಎ (ಮಹಿಳೆ) ಎಂದು ಮೀಸಲಾತಿ ನಿಗದಿಪಡಿಸಿರುವುದರಲ್ಲಿ ಯಾವುದೇ ಪುನರಾವರ್ತನೆ ಅಗಿಲ್ಲ, ಮೀಸಲಾತಿ ಮಾರ್ಗಸೂಚಿ ಉಲ್ಲಂಘನೆಯೂ ಆಗಿಲ್ಲ. ಆದ್ದರಿಂದ, ಇದನ್ನು ವಿಚಾರಣೆಗೆ ಪರಿಗಣಿಸುವುದಿಲ್ಲ’ ಎಂದು ಹೇಳಿದೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ