ವಿಜಯಪುರ: ರಾಜಕೀಯದವರು ಗೂಂಡಾಗಳು ಎಂದು ವಿಜಯಪುರದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ಶ್ರೀರಾಮಸೇನೆಯ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಲು ಆಗಮಿಸಿದ್ದ ವೇಳೆ ಪ್ರಮೋದ್ ಮುತಾಲಿಕ್ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ಬಂದಾಗ ರಾಜಕೀಯಕ್ಕೆ ಹಿಂದೂಗಳನ್ನು ಬಳಸಿಕೊಳ್ತಾರೆ. ಹಿಂದುತ್ವಕ್ಕೆ ಹೋರಾಡಿದವರ ಮೇಲೆ ರೌಡಿಶೀಟರ್ ಕೇಸ್ ಹಾಕಲಾಗುತ್ತೆ. ಅದನ್ನು ತಡೆಗಟ್ಟುವುದನ್ನು ಬಿಟ್ಟು, ತಮ್ಮ ಸ್ವಾರ್ಥಕ್ಕಾಗಿ ಹಿಂದುಗಳನ್ನು ಬಳಸಿಕೊಳ್ಳುತ್ತಾರೆ. ಹೀಗಾಗಿ ರಾಜಕಾರಣಿಗಳು ನಿಜವಾದ ಗೂಂಡಾಗಳು ಭ್ರಷ್ಟಾಚಾರಿಗಳೆಂದು ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ಸಾಲಾಗಿ ನಿಲ್ಲಿಸಿ ಗುಂಡು ಹಾರಿಸಬೇಕು :ಇನ್ನು ಪ್ರಮೋದ್ ಮುತಾಲಿಕ್ ರಾಜ್ಯದಲ್ಲಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಭ್ರಷ್ಟ ಅಧಿಕಾರಿಗಳನ್ನು ಗಲ್ಲಿಗೆ ಏರಿಸಬೇಕು. ಸಾಲಾಗಿ ನಿಲ್ಲಿಸಿ ಗುಂಡು ಹಾರಿಸಬೇಕೆಂದು ಪ್ರಮೋದ್ ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ. ಇಂತಹ ಅಧಿಕಾರಿಗಳ ಹಿಂದೆ ರಾಜಕಾರಣಿಗಳಿದ್ದಾರೆ. ಅವರನ್ನೂ ಹೊರಗೆ ಹಾಕಬೇಕು. ಹೊರಗೆ ಇದ್ದೋರು ಬಂದೂಕು, ಚಾಕು ಚೂರಿ ಹಿಡಿದುಕೊಂಡು ಲೂಟಿ ಮಾಡುತ್ತಾರೆ. ರಾಜಕೀಯದಲ್ಲಿ ಇದ್ದವರು ಅಧಿಕಾರಿಗಳನ್ನು ಬಳಸಿಕೊಂಡು ಲೂಟಿ ಮಾಡುತ್ತಾರೆ. ಎಲ್ಲ ಪಕ್ಷದ ಬಹುತೇಕ ರಾಜಕಾರಣಿಗಳು ಭ್ರಷ್ಟರು, ಗೂಂಡಾಗಳಾಗಿದ್ದಾರೆ ಎಂದು ರಾಜಕೀಯದಲ್ಲಿ ಅವಕಾಶ ಸಿಗದೇ ಆಸಕ್ತಿ ಕಳೆದುಕೊಂಡಿದ್ದಾಗಿ ನಗರದ ಶ್ರೀ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಮುತಾಲಿಕ್ ಅಸಮಾಧಾನ ಹೊರ ಹಾಕಿದ್ರು.
Laxmi News 24×7