Breaking News

ತೋಟಗಾರಿಕೆ ಬೆಳೆಗಳಲ್ಲಿ ಗುಣಮಟ್ಟದ ಉತ್ಪಾದನೆಗೆ ಉತ್ತೇಜನ ಕಾರ್ಯಕ್ರಮಗಳಡಿ ಅರ್ಜಿ ಆಹ್ವಾನ

Spread the love

ಬೆಳಗಾವಿ: 2021-22ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹೊಸದಾಗಿ ಅನುಮೋದನೆಗೊಂಡ ತೋಟಗಾರಿಕೆ ಬೆಳೆಗಳಲ್ಲಿ ಗುಣಮಟ್ಟದ ಉತ್ಪಾದನೆಗೆ ವಿಶೇಷ ಉತ್ತೇಜನ ಕಾರ್ಯಕ್ರಮದಡಿ ನೀರಿನಲ್ಲಿ ಕರಗುವ ರಸಗೊಬ್ಬರ (Water Soluble Fertilizers) ಖರೀದಿಗೆ ಸಹಾಯಧನ, ಲಘುಪೋಷಕಾಂಶಗಳ ಮಿಶ್ರಣ (Crop Special) ಹಣ್ಣು/ಹೂವು ಬೆಳೆ ಹೊದಿಕೆಗಳಿಗೆ (Fruit/Plant cover) ಸುರಂಗ ಮಾದರಿ ಪಾಲಿಹೌಸ್ ನಿರ್ಮಾಣಕ್ಕೆ, ತೋಟಗಾರಿಕೆ ಬೆಳೆಗಳ ಮೇಲಾವರಣ ( Canopy Management ) ನಿರ್ವಹಣೆಗೆ, ಹಳೆಯ ಪಾಲಿಹೌಸ್‌ಗಳಲ್ಲಿ ಪಾಲಿಥಿನ್ ಶೀಟ್ ಹಾಗೂ ಗಿಡಗಳ ಬದಲಾವಣೆಗೆ, ಕ್ಷೇತ್ರಮಟ್ಟದಲ್ಲಿ ವಿಂಗಡಣೆ, ಪ್ಯಾಕಿಂಗ್ ಮತ್ತು ಸಂಗ್ರಹಣೆ ಮಾಡುವ ಘಟಕಗಳಿಗೆ ( Farm Gate ) ಸಹಾಯಧನ, ಕೊಯ್ಲೋತ್ತರ ನಂತರ ಬಳಸುವ ಪ್ಲಾಸ್ಟಿಕ್ ಕ್ರೇಟ್ಸ್, ಪ್ಯಾನೆಟ್ ಬಾಕ್ಸಿಸ್, ಕೊರುಗೆಟೆಡ್ ಬಾಕ್ಸಿಸ್‌ಗಳ ಖರೀದಿಗೆ ಸಹಾಯಧನ ಹಾಗೂ ಸಮುದಾಯ/ವೈಯಕ್ತಿಕ ನೀರು ಸಂಗ್ರಹಣಾ ಘಟಕಗಳ ನಿರ್ಮಾಣಕ್ಕೆ ಸಹಾಯಧನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ತೋಟಗಾರಿಕೆ ಬೆಳೆಗಾರರು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ವಿವಿಧ ಯೋಜನೆಗಳ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ: ಸಂಬಂಧಿಸಿದ ಹೋಬಳಿ ಹಾಗೂ ತಾಲ್ಲೂಕು ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸುವುದು. ಅಥವಾ ದೂರವಾಣಿ ಸಂಖ್ಯೆ: ಅಥಣಿ: 08289-285099 ಚಿಕ್ಕೋಡಿ: 08338-274943 ಖಾನಾಪೂರ: 08336-223387 ಬೈಲಹೊಂಗಲ: 08288-233758 ಗೋಕಾಕ: 08332-220382 ರಾಯಬಾಗ: 08331-225049 ಸವದತ್ತಿ: 08330-222082 ಬೆಳಗಾವಿ: 0831-2431559, ಹುಕ್ಕೇರಿ: 08333-265915 ರಾಮದುರ್ಗ: 08335-241512 ಗೆ ಸಂಪರ್ಕಿಸಬಹುದು ಎಂದು ಬೆಳಗಾವಿಯ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ

Spread the love ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಉದ್ಘಾಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ