Breaking News

ಕೇಂದ್ರ ಸಚಿವ ಡಾ.ಭಾಗವತ್ ಕರದ್. huminality

Spread the love

ಇಂತಹ ಸುದ್ದಿಗಳು ಮಾಧ್ಯಮಗಳಲ್ಲಿ ಯಾಕೆ ಬರೋದಿಲ್ಲ ಅಂತ ಗೊತ್ತಿಲ್ಲ..

ನೆನ್ನೆ ಆಕಾಶದಲ್ಲಿ ಹಾರುತ್ತಿದ್ದ ಇಂಡಿಗೋ ವಿಮಾನದ, 12 ಎ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ತುರ್ತಾಗಿ ಅನಾರೋಗ್ಯಕ್ಕೆ ಒಳಗಾದರು, ಅವರು ಹೃದಯಾಘಾತಕ್ಕೆ ಒಳಗಾಗಿದ್ದರು. ಅವರು ಏಕಕಾಲದಲ್ಲಿ ಇತರ ಕೆಲವು ಆರೋಗ್ಯದ ಸಮಸ್ಯೆಗಳನ್ನು ಎದುರಿಸಿದರು.

ಆ ಸಮಯದಲ್ಲಿ ಒಬ್ಬರೇ ಒಬ್ಬರು ವೈದ್ಯರು ಮಾತ್ರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು, ಆ ವೈದ್ಯರೇ ಕೇಂದ್ರ ಸಚಿವ ಡಾ.ಭಾಗವತ್ ಕರದ್.

ಕೇಂದ್ರ ಸಚಿವರು, ತಮ್ಮ ಮಂತ್ರಿ ಎಂಬ ಅಹಂಕಾರವನ್ನು ಬಿಟ್ಟು, ಸುಮಾರು ಅರ್ಧ ಗಂಟೆ ವೈದ್ಯನಂತೆ ಆ ರೋಗಿಗಾಗಿ ಶ್ರಮಿಸಿದರು. ವಿಮಾನದಲ್ಲಿದ್ದ ಕೆಲವು ತುರ್ತು ಔಷಧಿಗಳು ಮತ್ತು ಚುಚ್ಚುಮದ್ದು ನೀಡಲಾಯಿತು, ರೋಗಿಯ ಸ್ಥಿತಿಯು ಬಹಳ ಮಟ್ಟಿಗೆ ಹತೋಟಿಗೆ ಬಂತು..

ವಿಮಾನ ಲ್ಯಾಂಡ್ ಆಗುತ್ತಿದ್ದ ಹಾಗೆ ರೋಗಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು, ಕೇವಲ 1 ದಿನದ ನಂತರ ರೋಗಿಯನ್ನು ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಇವತ್ತು ಆ ರೋಗಿ ಹಾಗೂ ಆತನ ಇಡೀ ಕುಟುಂಬ ಕೇಂದ್ರ ಸಚಿವ ಡಾ.ಭಾಗವತ್ ಕರದ್ ಅವರಿಗೆ ಧನ್ಯವಾದ ಅರ್ಪಿಸುತ್ತಿದೆ, ವೈದ್ಯರು ವಿಮಾನದಲ್ಲಿ ಇರದೇ ಇದ್ದಿದ್ದರೆ ಆ ರೋಗಿಯ ಜೀವ ಉಳಿಸಲು ಸಾಧ್ಯವೇ ಇರಲಿಲ್ಲ..

Well Done Dr Karad Sir…


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ