Breaking News

ಕಲ್ಯಾಣ ‌ಕರ್ನಾಟಕ ಸಾರಿಗೆ ಟಿಕೆಟ್’ ಯಡವಟ್ಟು, ಸೋಷಿಯಲ್ ಮೀಡಿಯಾದಲ್ಲಿ ವೈರಲ್.!

Spread the love

ಬೆಂಗಳೂರು: ಕಲ್ಯಾಣ ‌ಕರ್ನಾಟಕ ಸಾರಿಗೆ ನಿಗಮ( KKRTC ), ತನ್ನ ಟಿಕೆಟ್ ನಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ, ನಾಡಿನ ಸಾಂಸ್ಕೃತಿಕ ಹಿರಿಮೆ, ಗರಿಮೆ, ಚುನಾವಣೆ ಸಂದರ್ಭದಲ್ಲಿ ಮತದಾನ ಜಾಗೃತಿಯ ಬಗ್ಗೆ ಜಾಗೃತಿಯನ್ನು ಮೂಡಿಸುವಂತ ಬರಹಗಳನ್ನು ನಮೂದಿಸುತ್ತಿತ್ತು.

ಟಿಕೆಟ್ ಪಡೆದಂತ ಪ್ರಯಾಣಿಕ ಅದರ ಮೇಲಿದ್ದಂತ ಬರಹವನ್ನು ಓದುವ ಮೂಲಕ ಜಾಗೃತನಾಗುತ್ತಿದ್ದನು. ಇದೀಗ ಪದ್ಮಶ್ರೀ ಪುರಸ್ಕೃತ ( padma shri ) ಮಂಜಮ್ಮ ಜೋಗತಿಯ ( manjamma jogati ) ಬಗ್ಗೆ ಬರಹವಿದ್ದು, ವಿಜಯನಗರ ಜಿಲ್ಲೆಯ ಬದಲಾಗಿ, ಜಯನಗರ ಜಿಲ್ಲೆಯ ಎಂಬುದಾಗಿ ತಪ್ಪಾಗಿ ಮುದ್ರಿಸಿ, ಯಡವಟ್ಟು ಮಾಡಿದೆ. ಇಂತಹ ಬರಹದ ಟಿಕೆಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಅವರಿಗೆ ಗೌರವ ಸೂಚಿಸಲು ಹೋಗಿ ಕೆ ಕೆ ಆರ್ ಟಿ ಸಿ ಯಡವಟ್ಟು ಮಾಡಿದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ‘ಜಯನಗರ’ ಜಿಲ್ಲೆಯ ತೃತೀಯ ಲಿಂಗಿ ಮಾತಾ ಮಂಜಮ್ಮ ಜೋಗತಿಯವರಿಗೆ ಸಾರಿಗೆ ಇಲಾಖೆಂದ ಎಂದು ಮುದ್ರಣ ಮಾಡಲಾಗಿದೆ. ಈ ಮೂಲಕ ವಿಜಯನಗರ ಜಿಲ್ಲೆ ಎನ್ನುವ ಬದಲಾಗಿ ಜಯನಗರ ಜಿಲ್ಲೆ ಮಾಡಿ, ಯಡವಟ್ಟು ಮಾಡಿದೆ.

 

ಹೊಸಪೇಟೆಯಿಂದ ಸಂಡೂರು ಘಟಕಕ್ಕೆ ಹೋಗಬೇಕಾದರೆ ಪಡೆದಿರೋ ಟಿಕೆಟ್ ನಲ್ಲಿ ( KKRTC Bus Ticket ) ಇಂತಹ ತಪ್ಪು ಮುದ್ರಣವನ್ನು ಮಾಡಲಾಗಿದ್ದು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆಯ ಜಿಲ್ಲೆಯನ್ನೇ ತಪ್ಪಾಗಿ ಮುದ್ರಿಸಿರುವಂತ ಕೆ ಕೆ ಆರ್ ಟಿ ಸಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದೀಗ ಕೆ ಕೆ ಆರ್ ಟಿ ಸಿ ಯಡವಟ್ಟಿನ ಟಿಕೆಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Spread the love

About Laxminews 24x7

Check Also

ಆರೋಗ್ಯ ಮತ್ತು ಫಿಟ್ನೆಸ್ ಕಡೆ ಗಮನ ಹರಿಸಿದರೆ ಜೀವನದಲ್ಲಿ ಸದಾಕಾಲ ಸಂತೋಷದಿಂದ ಇರಬಹುದು ಎಂದು ಮೈಸೂರಿನಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೇಳಿದರು.

Spread the loveಮೈಸೂರು: ಜೀವನದಲ್ಲಿ ಸಂಪಾದನೆ ಮುಖ್ಯ. ಅದರೆ ಜೊತೆಯಲ್ಲಿ ನೆಮ್ಮದಿಯಾಗಿರಲು ಆರೋಗ್ಯವನ್ನೂ ಸಂಪಾದಿಸಬೇಕು ಎಂದು ಬಾಲಿವುಡ್ ನಟಿ ಶಿಲ್ಪ ಶೆಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ