Breaking News

ಜೈ ಭೀಮ್’ ನಲ್ಲಿ ಮಾಡಿದ್ದನ್ನು ನಿಜಜೀವನದಲ್ಲಿ ಮಾಡಿದ ನಟ ಸೂರ್ಯ

Spread the love

ನಟ ಸೂರ್ಯ ಅಭಿನಯದ ಜೈ ಭೀಮ್ ಸಿನಿಮಾದಲ್ಲಿ ಕೆಳವರ್ಗದ ಬಡ ಕಾರ್ಮಿಕ ರಾಜಕಣ್ಣು ಎಂಬಾತ ಲಾಕಪ್ ಡೆತ್ ಗೆ ನ್ಯಾಯ ಒದಗಿಸುವ ಕತೆಯಿದೆ.ಇದೀಗ ನಟ ಸೂರ್ಯ ಅದೇ ಮಾನವೀಯತೆಯನ್ನು ನಿಜ ಜೀವನದಲ್ಲೂ ತೋರಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜೈ ಭೀಮ್ ಸಿನಿಮಾ 1990 ರಲ್ಲಿ ನಡೆದ ರಾಜಾಕಣ್ಣು ಲಾಕಪ್ ಡೆತ್ ಘಟನೆಯಾಧಾರಿತ ಸಿನಿಮಾವಾಗಿದೆ.

ನಿಜ ಜೀವನದಲ್ಲಿ ರಾಜಾಕಣ್ಣು ಪತ್ನಿ ಪಾರ್ವತಿ ಈಗಲೂ ದೈನಂದಿನ ಬದುಕಿಗೆ ಕಷ್ಟಪಡುತ್ತಿದ್ದಾಳೆ. ಇದನ್ನು ಅರಿತ ಸೂರ್ಯ ಈಗ ಆಕೆಯ ಹೆಸರಿಗೆ 10 ಲಕ್ಷ ರೂ. ಡೆಪಾಸಿಟ್ ಮಾಡಿ ಸಹಾಯ ಮಾಡಿದ್ದಾರೆ.

10 ಲಕ್ಷ ರೂ. ಡೆಪಾಸಿಟ್ ನ ಬಡ್ಡಿ ಹಣ ಆಕೆಗೆ ಸಿಗುವಂತೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಹಣವನ್ನು ಆಕೆಯ ನಂತರ ತಲೆಮಾರು ಕೂಡಾ ಬಳಸುವಂತೆ ಸಹಾಯ ಮಾಡಿದ್ದಾರೆ. ನಿಜ ಜೀವನದಲ್ಲೂ ಸೂರ್ಯ ಈ ಮೂಲಕ ಹೀರೋ ಎನಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಉಗಾರದಲ್ಲಿ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ ಹತ್ಯೆ ಹಿನ್ನೆಲೆ – ಗ್ರಾಮಸ್ಥರ ಉಗ್ರ ಪ್ರತಿಭಟನೆ

Spread the love ಉಗಾರದಲ್ಲಿ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ ಹತ್ಯೆ ಹಿನ್ನೆಲೆ – ಗ್ರಾಮಸ್ಥರ ಉಗ್ರ ಪ್ರತಿಭಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ