Breaking News

ಅಭಿಮಾನಿಗಳ ಪ್ರೀತಿಗೆ ಮಾತು ಬರುತ್ತಿಲ್ಲ; ಭಾವುಕರಾದ ಶಿವಣ್ಣ; ‘ಅಪ್ಪು’ ಆಸೆಯಂತೆಯೇ ಜನರಿಗೆ ಊಟ ಬಡಿಸಿದ ‘ದೊಡ್ಮನೆ ಕುಟುಂಬ’

Spread the love

ಬೆಂಗಳೂರು: ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ‘ಅಪ್ಪು’ವಿನ ಆಸೆಯಂತೆಯೇ ಅಭಿಮಾನಿಗಳಿಗೆ, ಗಣ್ಯರಿಗೆ ದೊಡ್ಮನೆ ಕುಟುಂಬ ಸದಸ್ಯರು ಅನ್ನ ಸಂತರ್ಪಣೆ ಮಾಡಿದ್ದು, ಅಪ್ಪು ಫ್ಯಾನ್ಸ್ ಗೆ ಸ್ವತಃ ಪುನೀತ್ ಪತ್ನಿ ಅಶ್ವಿನಿ, ಸಹೋದರ ಶಿವರಾಜ್ ಕುಮಾರ್ ಊಟ ಬಡಿಸುವ ಮೂಲಕ ಅನ್ನದಾನ ಮಾಡಿದರು.

 

ಅಭಿಮಾನಿಗಳಿಗೆ ಊಟ ಬಡಿಸಿ ಅರಮನೆ ಮೈದಾನದಲ್ಲಿ ಮಾತನಾಡಿದ ನಟ ಶಿವರಾಜ್ ಕುಮಾರ್, ಇಂಥದ್ದೊಂದು ಸಂದರ್ಭ ಈ ರೀತಿ ಬಂದಿದ್ದು ನೋವಾಗಿದೆ. ಈ ರೀತಿ ಅಪ್ಪು ಆಸೆ ನೆರವೇರಿಸುವಂತಾಯಿತಲ್ಲ ಎಂಬ ನೋವಿದೆ. ಆದರೆ ಅಪ್ಪುವಿನ ಆಸೆಯಂತೆಯೇ ಅಭಿಮಾನಿಗಳಿಗೆ ಊಟ ಬಡಿಸುತ್ತೇವೆ ಎಂದರು.

 

ಅಭಿಮಾನಿಗಳ ಪ್ರೀತಿಗೆ ಮಾತು ಬರುತ್ತಿಲ್ಲ. ಅದಕ್ಕೆ ಅವರನ್ನು ಅಭಿಮಾನಿ ದೇವರುಗಳು ಎಂದು ಕರೆಯುವುದು. ಅಪ್ಪು ಆಸೆಯನ್ನು ನಾವು ನೆರವೇರಿಸುತ್ತಿದ್ದೇವೆ. ನೂಕು ನುಗ್ಗಲು ಮಾಡದೇ ನಿಧಾನವಾಗಿ ಬಂದು ಎಲ್ಲರೂ ಊಟ ಮಾಡಬೇಕು. ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಗದ್ದಲವಾಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಾರೆ. ಅಪ್ಪುನಂತ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ. ಬಲಗೈ ಮಾಡಿದ ಸಹಾಯ ಎಡಗೈಗೆ ಗೊತ್ತಾಗದಂತೆ ನೋಡಿಕೊಳ್ಳುತ್ತಿದ್ದ. ಅವನ ಒಳ್ಳೆಯ ಗುಣಗಳನ್ನು ನಾವು ಅನುಸರಿಸಬೇಕು ಎಂದು ಹೇಳಿದರು.

 

ಈ ವೇಳೆ ಮಾತನಾಡಿದ ರಾಘವೇಂದ್ರ ರಾಜಕುಮಾರ್, ಜನರಿಗೆ ಊಟ ಹಾಕಬೇಕು ಎಂಬುದು ಅಪ್ಪು ಕನಸು. ಅಭಿಮಾನಿಗಳು ನಿಧಾನವಾಗಿ ಬಂದು ಊಟ ಮಾಡಿ ಹೋಗಬೇಕು. ಆತನ ಒಳ್ಳೆಯತನವನ್ನು ನಾವೆಲ್ಲರೂ ಫಾಲೋಮಾಡೋಣ ಎಂದು ಹೇಳಿದರು.

ಇದೇ ವೇಳೆ ಶಿವರಾಜ್ ಕುಮಾರ್ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು, ರಕ್ತದಾನ ಮಾಡಿದರು


Spread the love

About Laxminews 24x7

Check Also

ಉಗಾರದಲ್ಲಿ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ ಹತ್ಯೆ ಹಿನ್ನೆಲೆ – ಗ್ರಾಮಸ್ಥರ ಉಗ್ರ ಪ್ರತಿಭಟನೆ

Spread the love ಉಗಾರದಲ್ಲಿ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ ಹತ್ಯೆ ಹಿನ್ನೆಲೆ – ಗ್ರಾಮಸ್ಥರ ಉಗ್ರ ಪ್ರತಿಭಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ