ಮಂಗಳೂರು(ನ.09): ಎಚ್ಚರ ತಪ್ಪಿದರೆ ಹೀರೋ ಆಗಲು ಹೋಗಿ ವಿಲನ್ ಆಗುವ ಸಾಧ್ಯತೆ ಈಗಿನ ಕಾಲದಲ್ಲಿ ಹೆಚ್ಚು. ಕಾರಣ ಎಲ್ಲಿ ಕ್ಯಾಮರ ಇರುತ್ತೆ, ಎಲ್ಲಿ ರೆಕಾರ್ಡ್ ಆಗುತ್ತೆ ಅನ್ನೋದು ಯಾರಿಗೂ ಗೊತ್ತಾಗಲ್ಲ. ಹೀಗೇ ಸುತ್ತ ಮುತ್ತ ನೋಡಿ, ಯಾರು ಇಲ್ಲ ಎಂದುಕೊಂಡ ಜೋಡಿ, ಸಾರ್ವಜನಿಕ ಪ್ರದೇಶದಲ್ಲಿ ರೋಮ್ಯಾನ್ಸ್‌ಗೆ ಇಳಿದೆದೆ. ಆದರೆ ಅಲ್ಲೊಂದು ಕ್ಯಾಮಾರ ಕಣ್ಣು ಎಲ್ಲವನ್ನೂ ಸೆರೆ ಹಿಡಿದಿದೆ. ಇದು ಮಂಗಳೂರಿನ ಮಾಲ್ ಒಂದರಲ್ಲಿ ನಡೆದ ಘಟನೆ. ಮಾಲ್ ಬಾಲ್ಕನಿಯಲ್ಲಿ ನಿಂತ ಜೋಡಿ, ಸಾರ್ವಜನಿಕ ಪ್ರದೇಶ ಅನ್ನೋದನ್ನೇ ಮೈಮರೆತು ರೋಮ್ಯಾನ್ಸ್‌ನಲ್ಲಿ ತೊಡಗಿದೆ.
