ಬೆಳಗಾವಿ : ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 206 ಪ್ರಕರಣಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಪತ್ತೆ ಹಚ್ಚಿದ್ದು, ₹ 8.58 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ
ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಇದೇ ವೇಳೆ ಮಾತನಾಡಿದ ಅವರು, ಕಾಗವಾಡ, ಚಿಕ್ಕೋಡಿ, ಅಥಣಿ, ಗೋಕಾಕ, ಅಂಕಲಿ, ಮುರಗೋಡ, ಘಟಪ್ರಭಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಗಳಲ್ಲಿ ಸಿಇಎನ್ ಅಪರಾಧ ಠಾಣೆಯಿಂದ 2020ರಲ್ಲಿ ₹ 10.97 ಲಕ್ಷ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
2020ರಲ್ಲಿ ₹ 1.10 ಕೋಟಿ ಹಾಗೂ 2021ರಲ್ಲಿ ₹ 10,06,850 ಕಳವಾಗಿತ್ತು. ಅದನ್ನೂ ಕಳ್ಳರಿಂದ ಜಪ್ತಿ ಮಾಡಲಾಗಿದೆ. ಜಾನುವಾರು, ಅರಿಸಿನ, ಧಾನ್ಯ, ಟೈಯರ್‌ಗಳು ಮತ್ತಿತರ ವಸ್ತುಗಳನ್ನು ಕಳವು ಮಾಡಿರುವುದು ವರದಿಯಾಗಿದೆ.
ವಶಪಡಿಸಿಕೊಳ್ಳಲಾದ ವಸ್ತುಗಳನ್ನು ಕಳೆದುಕೊಂಡವರು ಅಥವಾ ವಾರಸುದಾರರಿಗೆ ಮರಳಿಸಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.
2020ರಲ್ಲಿ ₹ 1.05 ಕೋಟಿ ಮೌಲ್ಯದ 2 ಕೆ.ಜಿ. 336 ಗ್ರಾಂ. ಚಿನ್ನ, ₹ 7.74 ಲಕ್ಷ ಮೌಲ್ಯದ 17 ಕೆ.ಜಿ. 881 ಗ್ರಾಂ. ಬೆಳ್ಳಿ, 2021ರಲ್ಲಿ ₹ 27.25 ಲಕ್ಷ ಮೌಲ್ಯದ 702.24 ಗ್ರಾಂ. ಚಿನ್ನಾಭರಣ ಮತ್ತು ₹ 52,900 ಮೌಲ್ಯದ 1 ಕೆ.ಜಿ. 275 ಗ್ರಾಂ. ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ₹ 47.35 ಲಕ್ಷ ಮೌಲ್ಯದ 168 ದ್ವಿಚಕ್ರವಾಹನಗಳು, 22 ಕಾರುಗಳು ಹಾಗೂ 32 ಮೊಬೈಲ್ ಫೋನ್‌ಗಳ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.