ಮಂಡ್ಯ: ಹೊಟ್ಟೆಪಾಡಿಗಾಗಿ ದಲಿತ ನಾಯಕರು(Dalit Leader) ಬಿಜೆಪಿಯಲ್ಲಿದ್ದಾರೆ (BJP) ಎನ್ನುವ ಮೂಲಕ ದಲಿತರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವಮಾನ ಮಾಡಿದ್ದಾರೆ ಎಂದು ಕಳೆದ ಮೂರ್ನಾಲ್ಕು ದಿನಗಳಿಂದ ಬಿಜೆಪಿ ನಾಯಕರು ಕಿಡಿಕಾರುತ್ತಿದ್ದಾರೆ. ಸಿದ್ದರಾಮಯ್ಯ ದಲಿತರ ಕ್ಷಮೆ (apology to dalits) ಕೇಳಬೇಕು ಎಂದು ಹಲವು ಕಡೆ ಬಿಜೆಪಿಗರು ಪ್ರತಿಭಟನೆ (Protest) ನಡೆಸಿ, ಪ್ರತಿಕೃತಿ ದಹಿಸಿದರು. ಇಡೀ ಬೆಳವಣಿಗೆ ಬಗ್ಗೆ ಇಂದು ಇಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಗರಿಗೆ ತಿರುಗೇಟು ನೀಡಿದರು. ಬಿಜೆಪಿಯವರಂತ ಕೊಳಕರು, ಜಾತಿವಾದಿಗಳು ಇನ್ಯಾರೂ ಇಲ್ಲ ಎಂದು ಕಟುವಾಗಿ ಟೀಕಿಸಿದರು. ಸಂವಿಧಾನ ಬದಲಾವಣೆ ಮಾಡ್ತೀನಿ ಅಂದವರ ಪಕ್ಷಕ್ಕೆ ಹಲವರು ಹೋಗ್ತಿದ್ದಾರೆ ಅಂತ ನಾನು ಭಾಷಣ ಮಾಡಿದ್ದೆ. ಆದರೆ ಬಿಜೆಪಿಯವರು ನನ್ನ ಹೇಳಿಕೆ ತಿರುಚಿ ಅಪಪ್ರಚಾರ ಮಾಡ್ತಿದ್ದಾರೆ ಎಂದು ದಲಿತ ಹೇಳಿಕೆ ವಿವಾದಕ್ಕೆ ಪ್ರತಿಯಾಗಿ ಆರೋಪ ಮಾಡಿದರು.
ಬಿಜೆಪಿಯವರಂತ ಕೊಳಕರು, ಜಾತಿವಾದಿಗಳು ಇನ್ಯಾರೂ ಇಲ್ಲ
ಸಿದ್ದರಾಮಯ್ಯ ಜಾತಿವಾದ ಮಾಡ್ತಿದ್ದಾರೆ ಅಂತಾರೆ. ಇತಿಹಾದ ಪುರುಷರ ಜಯಂತಿ ಆಚರಣೆ ಜಾರಿಗೆ ತಂದಿದ್ದೆ ನಾನು. ಇವರೇ ಗಿರಾಕಿಗಳು ಕೊಳಕರು ಅವರೇ ಜಾತಿ ಮಾಡೋದು. ಜಾತಿ ಕೊಳಕರೆ ಜಾತಿ ಮಾಡೋದು, ಆದ್ರೆ ನನ್ನ ಜಾತಿವಾದ ಮಾಡ್ತಾರೆ ಎನ್ನುತ್ತಿದ್ದಾರೆ. ನಾನು ಮುಖ್ಯಮಂತ್ರಿ ಆದ್ನಲ್ಲ ಅನ್ನೋ ಹೊಟ್ಟೆ ಉರಿಯಿಂದ ಹಾಗೆ ಹೇಳ್ತಾರೆ. ಬಿಜೆಪಿಯವರಂತ ಕೊಳಕರು, ಜಾತಿವಾದಿಗಳು ಇನ್ಯಾರೂ ಇಲ್ಲ. ಇದನ್ನೇ ಕೆಟ್ಟದ್ದಾಗಿ ಹೇಳಿಕೊಂಡು ನನ್ನ ವಿರುದ್ಧ ಹೋರಾಟ ಮಾಡಿದ್ದಾರೆ. ಹೀಗಾಗಿ ನೀವು ಅವರ ಬಗ್ಗೆ ಹುಷಾರಾಗಿರಿ ಎಂದು ಬೆಂಬಲಿಗರಿಗೆ ಎಚ್ಚರಿಸಿದರು.
ಎಲ್ಲಾ ಜಾತಿಗಳ ಬಡವರ ಅಭಿವೃದ್ಧಿ ನನ್ನ ಆಯ್ಕೆ
ನನ್ನ ಫ್ಲೆಕ್ಸ್ ಸುಟ್ಟಿದ ತಕ್ಷಣ ನಾನು ಸುಟ್ಟೋಗಲ್ಲ. ನನ್ನ ಜನ, ನನ್ನ ಪ್ರೀತಿಸುವವರು ಸುಟ್ಟೋಗಲ್ಲ, ಎಲ್ಲರೂ ಸಮಾನವಾಗಿರಬೇಕು. ಜಾತಿ ವ್ಯವಸ್ಥೆ ಸಮಾಜದಿಂದ ದೂರವಾಗಬೇಕು. ಮನುಷ್ಯರಾಗಿ, ಸಮಾನರಾಗಿ ಬದುಕುವಂತಾಗಬೇಕು. ಬಹಳ ಜನ ಬುದ್ಧಿ ಹೀನರು ಟೀಕೆ ಮಾಡ್ತಾರೆ. ಸಿದ್ದರಾಮಯ್ಯ ಈ ಸಮಾಜಕ್ಕೆ ಏನು ಕೊಟ್ಟ ಅಂತಾರೆ. ಒಂದು ಜಾತಿಯಲ್ಲಿ ಮಾತ್ರ ಬಡವ, ಶ್ರೀಮಂತ ಅಂತ ಇಲ್ಲ. ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ, ಹೀಗಾಗಿ ಎಲ್ಲಾ ಜಾತಿಯ ಬಡವರ ಅಭಿವೃದ್ಧಿ ಆಗಬೇಕು.
ಎಲ್ಲಾ ಜಾತಿಗಳ ನಾಯಕರ ಜಯಂತಿ ಮಾಡಿದೆ. ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮ, ಟಿಪ್ಪು, ಭಗೀರತ, ಕೃಷ್ಣ, ಜೈನ ಜಯಂತಿ ಮಾಡಿದ್ದು ನಾನು. ಆದರೂ ಸಿದ್ದರಾಮಯ್ಯನ ಜಾತಿ ಜಾತಿ ಅಂತಾರೆ ಎಂದು ವಿಷಾದ ವ್ಯಕ್ತಪಡಿಸಿದರು.