Breaking News

ನವದೆಹಲಿ : ಅಕ್ಷರ ಸಂತ ಹರೇಕಳ ಹಾಜಬ್ಬ ಅವ್ರಿಗೆ ದೇಶದ ನಾಲ್ಕನೇ ಅತೀ ದೊಡ್ಡ ನಾಗರಿಕ ಪುರಸ್ಕಾರವಾದ ‘ಪದ್ಮಶ್ರೀ’ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯ್ತು.

Spread the love

ನವದೆಹಲಿ : ಅಕ್ಷರ ಸಂತ ಹರೇಕಳ ಹಾಜಬ್ಬ ಅವ್ರಿಗೆ ದೇಶದ ನಾಲ್ಕನೇ ಅತೀ ದೊಡ್ಡ ನಾಗರಿಕ ಪುರಸ್ಕಾರವಾದ ‘ಪದ್ಮಶ್ರೀ’ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯ್ತು.

ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವ್ರು ಹರೇಕಳ ಹಾಜಬ್ಬರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ರು.

ಈ ಸಮಾರಂಭದಲ್ಲಿ ಎಂದಿನಂತೆ ಸರಳ ಉಡುಗೆಯಲ್ಲಿಯೇ ಗಮನ ಸೆಳೆದ ಹಾಜಬ್ಬ, ಬರೀಗಾಲಿನಲ್ಲಿ ಬಂದು ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿ ಗಮನ ಸೇಳೆದ್ರು. ಇನ್ನಿವ್ರ ಸರಳ, ಸಜ್ಜನಿಕೆಗೆ ಮಾರು ರಾಷ್ಟ್ರಪತಿಗಳು ಮೆಚ್ಚುಗೆ ಸೂಚಿಸಿದ್ರು. ಇನ್ನು ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

ಅಂದ್ಹಾಗೆ, ಸ್ವಂತ ದುಡಿಮೆಯಲ್ಲಿ ಬಡಮಕ್ಕಳಿಗಾಗಿ ಶಾಲೆ ನಿರ್ಮಿಸಿ, ನೂರಾರು ಮಕ್ಕಳ ವಿದ್ಯಾರ್ಜನೆಗೆ ನೆರವಾದ ಕಿತ್ತಳೆ ವ್ಯಾಪಾರಿಯಾಗಿದ್ದ ಹರೇಕಳ ಹಾಜಬ್ಬರನ್ನ ಗುರುತಿಸಿದ ಕೇಂದ್ರ ಸರ್ಕಾರ, 2020ನೇ ಸಾಲಿನ ‘ಪದ್ಮಶ್ರೀ’ಗೆ ಆಯ್ಕೆ ಮಾಡಿ, ಜನವರಿ 25ರಂದು ಪ್ರಶಸ್ತಿ ಘೋಷಿಸಿತ್ತು. ಇನ್ನು ಅದೇ ವರ್ಷ ಮಾರ್ಚ್ ತಿಂಗಳಲ್ಲಿ ಪ್ರಶಸ್ತಿ ಪ್ರಧಾನ ಮಾಡುವ ದಿನಾಂಕವನ್ನೂ ನಿಗದಿಪಡಿಸಿತ್ತು. ಆದ್ರೆ, ಕೊರೊನಾ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು.


Spread the love

About Laxminews 24x7

Check Also

ಗವರ್ನರ್ V/S ಗವರ್ನಮೆಂಟ್‌: ಭಾಷಣದ ಕೆಲ ಸಾಲು ಬದಲಾವಣೆಗೆ ನಿರ್ಧಾರ; ಒಪ್ಪದಿದ್ದರೆ ಕಾನೂನು ಹೋರಾಟವೆಂದ ಸರ್ಕಾರ

Spread the loveಬೆಂಗಳೂರು: ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ನಡುವೆ ಸಂಘರ್ಷ ಶುರುವಾದಂತಿದೆ‌. ಇಂದು ವಿಶೇಷ ಅಧಿವೇಶನಕ್ಕಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ