ಮೂತ್ರ ವಿಸರ್ಜನೆಗೆ ಮೊಬೈಲ್ ಟಾಯ್ಲೆಟ್‍ಗೆ ಹೋಗಿದ್ದ ಯುವಕನೊರ್ವ ಮೊಬೈಲ್ ಟಾಯ್ಕೆಟ್ ಕುಸಿದು ಗಾಯಗೊಂಡಿರುವ ಘಟನೆ ಬೆಳಗಾವಿಯ ಕೇಂದ್ರ ರೈಲ್ವೇ ನಿಲ್ದಾಣದ ಆವರಣದಲ್ಲಿ ನಡೆದಿದೆ.
ಬೆಳಗಾವಿಯ ಗಾಂಧಿ ನಗರದ ಮಾರುತಿ ಕಣಬರಕರ್ ಗಾಯಗೊಂಡಿರುವ ಯುವಕ. ನಿನ್ನೆ ಶುಕ್ರವಾರ ರಾತ್ರಿ 1 ಗಂಟೆ ಸುಮಾರಿಗೆ ನಿಜಾಮುದ್ದೀನ್ ರೈಲಿನಲ್ಲಿ ಬೆಳಗಾವಿಗೆ ಬಂದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಮೊಬೈಲ್ ಟಾಯ್ಲೇಟ್‍ಗೆ ಮೂತ್ರ ವಿಸರ್ಜನೆಗೆ ಅಂತಾ ಹೋಗಿದ್ದಾನೆ. ಕಾಲು ಇಡುತ್ತಿದ್ದಂತೆ ಏಕಾಏಕಿ ಮೊಬೈಲ್ ಟಾಯ್ಕೆಟ್ ಕುಸಿದು ಕೆಳಗೆ ಬಿದ್ದಿದ್ದಾನೆ. ಇದರಿಂದ ಕಾಲಿಗೆ ಗಾಯವಾದ ಹಿನ್ನೆಲೆ ಸಂಬಂಧಿಕರು ಈತನನ್ನು ಜಿಲ್ಲಾಸ್ಪತ್ರೆಗೆ ಕಳಿಸಿದ್ದಾರೆ. ಅದೇ ರೀತಿ ಮೊಬೈಲ್ ಟಾಯ್ಲೆಟ್‍ನ ಕಳಪೆ ಕಾಮಗಾರಿ ಬಗ್ಗೆ ರೈಲ್ವೇ ಮ್ಯಾನೇಜರ್‍ಗೆ ದೂರು ನೀಡಲಾಗಿದ್ದು. ಈ ಬಗ್ಗೆ ಮಾತನಾಡಿರುವ ಗಾಯಾಳುವಿನ ಸಹೋದರ ಸೂರಜ್ ಕಣಬರಕರ್ ಮೊಬೈಲ್ ಟಾಯ್ಲೆಟ್‍ನ ಕಳಪೆ ಕಾಮಗಾರಿಯಾಗಿದೆ, ಇದರಿಂದಲೇ ನಮ್ಮ ಸಹೋದರನ ಕಾಲಿಗೆ ಗಾಯವಾಗಿದೆ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಒಟ್ಟಿನಲ್ಲಿ ಬೆಳಗಾವಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ, ಆದರೆ ಈ ರೀತಿ ಕಳಪೆ ಕಾಮಗಾರಿಗಳಿಂದ ಜನ ಕಂಗಾಲಾಗಿದ್ದಾರೆ. ಕಳಪೆ ಕಾಮಗಾರಿಯಿಂದ ಜನರ ಜೀವಗಳಿಗೆ ಕುತ್ತಾದರೆ ಯಾರು ಹೊಣೆ ಎಂಬ ಪ್ರಶ್ನೆ ಸಧ್ಯ ಮೂಡಿದೆ.
Laxmi News 24×7