ಮೈಸೂರು/ಕಲಬುರಗಿ, ಏಪ್ರಿಲ್ 13: ರಸ್ತೆಯುದ್ದಕ್ಕೂ ಎಂಜಲು ತುಪ್ಪುತ್ತಾ ಹೋಗುತ್ತಿದ್ದ ಇಬ್ಬರು ಅಪರಿಚಿತರನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಹಾಗೂ ಕಲಬುರಗಿಯಲ್ಲಿ ಓರ್ವನನ್ನು ಬಂಧಿಸಲಾಗಿದೆ. ಕೊರೊನಾ ವೈರಸ್ ಭೀತಿ ಆರಂಭವಾದಾಗಿನಿಂದ ಸೀನುವುದು, ಕೆಮ್ಮುವುದು ಇದರ ಮೇಲೆ ಜನರೆಲ್ಲರ ಗಮನವಿರುತ್ತದೆ.
ಹೋಗಿರುವಾಗ ರಸ್ತೆಯಲ್ಲಿ ಉಗುಳುತ್ತಾ ಹೋದವನ ಮೇಲೆ ಸಾರ್ವಜನಿಕರಿಗೆ ಅನುಮಾನ ಬಂದು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ ತಕ್ಷಣವೇ ಬಂದು ಆತನನ್ನು ಬಂಧಿಸಿದ್ದಾರೆ. ಆದರೆ ವಿಚಾರಣೆ ವೇಳೆ ಹೇಳಿಕೆಯನ್ನು ಪದೇ ಪದೇ ಬದಲಾಯಿಸಿದ್ದಾನೆ. ಹೀಗಾಗಿ ಆತನ ಮೇಲಿದ್ದ ಅನುಮಾನ ಇನ್ನಷ್ಟು ಹೆಚ್ಚಾಗಿದೆ.
