Breaking News

ಡಾ.ರಾಜ್ ಕುಟುಂಬದ ವೈದ್ಯ ಡಾ.ರಮಣರಾವ್ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್

Spread the love

ಬೆಂಗಳೂರು, ನ.6- ಪುನೀತ್ ರಾಜ್‍ಕುಮಾರ್ ಅವರ ಸಾವಿಗೆ ವೈದ್ಯರ ಎಡವಟ್ಟೇ ಕಾರಣ ಎಂದು ಕೆಲವರು ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಡಾ.ರಾಜ್ ಕುಟುಂಬದ ವೈದ್ಯ ಡಾ.ರಮಣರಾವ್ ಅವರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಸದಾಶಿವನಗರದಲ್ಲಿರುವ ಅವರ ನಿವಾಸದ ಬಳಿ ಇರುವ ವೈದ್ಯ ರಮಣರಾವ್ ಅವರ ಮನೆ ಮತ್ತು ಕ್ಲಿನಿಕ್ ಬಳಿ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿದೆ.

ಈಗಾಗಲೇ ಕೆಲ ಅಭಿಮಾನಿಗಳು ವೈದ್ಯರನ್ನು ಬಂಸಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಪ್ರತಿಭಟನೆಗಳು ಕೂಡ ವಿವಿಧೆಡೆ ಆರಂಭಗೊಂಡಿದೆ. ಹಲವು ಸಂಘಟನೆಗಳು ನಿವಾಸದ ಬಳಿ ಪ್ರತಿಭಟನೆ ನಡೆಸುವ ಸಾಧ್ಯತೆ ಇರುವುದರಿಂದ ಪೊಲೀಸರ ಗಸ್ತು ಹಾಗೂ ಕಾವಲನ್ನು ಹೆಚ್ಚಿಸಲಾಗಿದೆ.

# ವೈದ್ಯ ರಮಣರಾವ್ ಸ್ಪಷ್ಟನೆ:

ಪುನೀತ್ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಅವರು ನಮ್ಮ ಕ್ಲಿನಿಕ್‍ಗೆ ಬಂದಾಗ ನಾವು ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ್ದೇವೆ ಎಂದು ಡಾ.ರಮಣರಾವ್ ತಿಳಿಸಿದ್ದಾರೆ. ಕಳೆದ 35 ವರ್ಷಗಳಿಂದ ನಾನು ಡಾ.ರಾಜ್‍ಕುಮಾರ್ ಕುಟುಂಬದ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ.

ನಮ್ಮಿಂದ ಯಾವುದೇ ಲೋಪವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪುನೀತ್ ಬಂದ ಸಂದರ್ಭದಲ್ಲಿ ಅವರಿಗೆ ಇಸಿಜಿ ಮಾಡಲಾಗಿತ್ತು. ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬಂದಿರಲಿಲ್ಲ. ಆದರೆ ಹೃದಯಾಘಾತವಾಗಿರ ಬಹುದು ಎಂಬ ಸಂಶಯದಲ್ಲಿ ತುರ್ತಾಗಿ ಆಯಂಜಿಯೋ ಗ್ರಾಂ ಮಾಡಲು ವಿಕ್ರಂ ಆಸ್ಪತ್ರೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದೆವು.

ಕಾರಿನತ್ತ ಬಂದಾಗ ಅವರಿಗೆ ತಲೆಸುತ್ತು ಬಂದಿತ್ತು. ತಕ್ಷಣ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಕೇವಲ 4-5 ನಿಮಿಷದಲ್ಲೇ ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ಅಲ್ಲೂ ಕೂಡ ಎಲ್ಲಾ ರೀತಿಯ ಚಿಕಿತ್ಸೆ ನೀಡಿದರೂ ಸಫಲವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.

#ಅಭಿಮಾನಿಗಳ ದಂಡು:

ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ದಿ.ಪುನೀತ್ ರಾಜ್‍ಕುಮಾರ್ ಅವರ ಸಮಾ ದರ್ಶನಕ್ಕೆ ರಾಜ್ಯದ ವಿವಿಧೆಡೆಗಳಿಂದ ಅಭಿಮಾನಿಗಳ ದಂಡು ಇಂದೂ ಕೂಡ ಆಗಮಿಸುತ್ತಿದೆ. ಪುನೀತ್ ಇಷ್ಟು ಬೇಗ ನಮ್ಮಿಂದ ದೂರವಾದನಲ್ಲ ಎಂದು ಕಣ್ಣೀರು ಹಾಕಿ ಸಮಾ ಮುಂದೆ ಮೌನ ಆಚರಿಸುತ್ತಿದ್ದಾರೆ.

ಮಕ್ಕಳು, ಹಿರಿಯರು, ಯುವಕರು ಸೇರಿದಂತೆ ಅನಾಥಾಶ್ರಮ, ವಿವಿಧ ಸಂಘಟನೆಗಳು ತಮ್ಮದೇ ಆದ ರೀತಿಯಲ್ಲಿ ಅಪ್ಪುಗೆ ನಮನ ಸಲ್ಲಿಸುತ್ತಿದೆ.ವಿಕಲಚೇತನರು ಕೂಡ ಸಮಾ ಮುಂದೆ ಕುಳಿತು ಅಪ್ಪು ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿರುವ ದೃಶ್ಯಗಳು ಮನ ಕಲಕುವಂತಿದೆ. ಅಪ್ಪು ಅಗಲಿ 8 ದಿನ ಕಳೆದರೂ ಅಭಿಮಾನಿಗಳಲ್ಲಿ ಇನ್ನು ನೋವು ಹಾಗೆಯೇ ಇದೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ