ನವದೆಹಲಿ: ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಆಗುತ್ತಿದ್ದಂತೆಯೇ ಡ್ರಗ್ಸ್ ವಿರೋಧಿಗಳು, ಯುವಜನರು ಹಾದಿ ತಪ್ಪುತ್ತಿರುವ ಬಗ್ಗೆ ಕಳಕಳಿ ಇರುವವರು ಎಲ್ಲರೂ ಶಾರುಖ್ ಮಗನ ಬಗ್ಗೆ ಗರಂ ಆದವರೇ.
ಚಿತ್ರರಂಗದ ಕೆಲವರು ಹಾಗೂ ಕೆಲವೇ ಕೆಲವು ಕಾಂಗ್ರೆಸ್ ನಾಯಕರು ಶಾರುಖ್ ಖಾನ್ ಬೆಂಬಲಕ್ಕೆ ನಿಂತಿದ್ದರು. ಆರ್ಯನ್ ಖಾನ್‌ನನ್ನು ಬಂಧಿಸಿದ್ದು ತಪ್ಪು ಎಂಬ ಬಗ್ಗೆ ಮಾತನಾಡಿದ್ದರು.
ಇದೀಗ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಈ ಸಮಯದಲ್ಲಿ ಶಾರುಖ್‌ಖಾನ್ ಅವರಿಗೆ ಬರೆದಿರುವ ಪತ್ರವೊಂದು ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.
ಅದೇನೆಂದರೆ ‘ಇಡೀ ದೇಶ ನಿಮ್ಮೊಂದಿಗಿದೆ ಸರ್. ನೀವು ಹೆದರಬೇಡಿ. ನಿಮಗೆ ಈ ರೀತಿಯಲ್ಲಿ ಕಷ್ಟ ಆಗಿರುವುದಕ್ಕೆ ಕ್ಷಮೆಯಾಚಿಸುವೆ. ಯಾವ ಮಗುವನ್ನು ಕೂಡ ಈ ರೀತಿ ನಡೆಸಿಕೊಳ್ಳಬಾರದು (ಬಂಧಿಸಿರುವುದು ಸರಿಯಲ್ಲ ಎಂದು). ನೀವು ಜನರಿಗೆ ಮಾಡಿರುವ ಒಳ್ಳೆಯ ಕೆಲಸವನ್ನು ನೋಡಿರುವೆ. ಅವರ ಆಶೀರ್ವಾದ, ಹಾರೈಕೆ ನಿಮ್ಮ ಜತೆ ಇದೆ, ಇಡೀ ದೇಶ ನಿಮ್ಮ ಜತೆಗಿದೆ’ ಎಂದು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
25 ದಿನಗಳವರೆಗೆ ಜೈಲಿನಲ್ಲಿದ್ದ ಆರ್ಯನ್ ಹೈಕೋರ್ಟ್ ಜಾಮೀನಿನ ನಂತರ ಅಕ್ಟೋಬರ್ 30ರಂದು ಬಿಡುಗಡೆ ಹೊಂದಿದ್ದಾರೆ. ಮಾನಸಿಕವಾಗಿ ಕುಗ್ಗಿರುವ ಅವರನ್ನು ಈ ಕಷ್ಟದಿಂದ ಹೊರಬರಲು ಶಾರುಖ್ ಕೋಚ್‌ವೊಬ್ಬರನ್ನು ನೇಮಕ ಮಾಡುವ ಯೋಚನೆಯಲ್ಲಿದ್ದಾರೆ.