Breaking News

ಮೂರು ಕೆ.ಜಿ. ಚಿನ್ನದ ಸರ ಧರಿಸಿ ಮಿರಮಿರ ಮಿಂಚಿದ ‘ಬಾಹುಬಲಿ’: ಸರದ್‌ ಉತ್ಸವದಲ್ಲಿ ಗಮನ ಸೆಳೆದ ಕೋಣ

Spread the love

ಹೈದರಾಬಾದ್ (ತೆಲಂಗಾಣ): ದೀಪಾವಳಿ ಸಮಯದಲ್ಲಿ ಹೈದರಾಬಾದ್‌ನಲ್ಲಿ ಕೋಣಗಳ ಉತ್ಸವ ನಡೆಯುತ್ತದೆ. ಇದಕ್ಕೆ ಸದರ್‌ ಉತ್ಸವ ಎನ್ನುತ್ತಾರೆ. ಇದಕ್ಕಾಗಿ ಕೋಣಗಳಿಗೆ ಶೃಂಗಾರ ಮಾಡುವುದು, ಅವುಗಳನ್ನು ಉತ್ಸವಕ್ಕೆ ಸಜ್ಜುಗೊಳಿಸಲಾಗುವುದು, ಮಿರಮಿರ ಮಿಂಚುಗ ಕೋಣಗಳನ್ನು ನೋಡುವುದೇ ಒಂದು ಅಂದ.

ಇವುಗಳಿಂದ ಹಲವಾರು ರೀತಿಯ ಸಾಹಸಗಳನ್ನೂ ಈ ಸಮಯದಲ್ಲಿ ಮಾಡಿಸಲಾಗುವುದು.

ಇನ್ನು ನಿಜಾಮರ ಕಾಲದಿಂದಲೂ ಸದರ್ ಉತ್ಸವ ಪ್ರತಿ ವರ್ಷ ನಡೆಯುತ್ತಿದ್ದು, ಹಸುಗಳು, ಎಮ್ಮೆ, ಎತ್ತು ಕೋಣಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ.

ಈ ಉತ್ಸವದಲ್ಲಿ ಪಾಲ್ಗೊಳ್ಳಲು ಬೇರೆ ಬೇರೆ ರಾಜ್ಯಗಳಿಂದಲೂ ಜನರು ಬರುತ್ತಾರೆ. ಇದೀಗ ಈ ವರ್ಷದ ಹೈಲೈಟ್‌ ಬಾಹುಬಲಿ. ಬಾಹುಬಲಿ ಎಂದು ಹೆಸರು ಇರುವ ಕೋಣವನ್ನು ಹರಿಯಾಣದಿಂದ ತರಿಸಲಾಗಿದೆ.
ಅದಕ್ಕೆ ಬಾಹುಬಲಿ ಕೋಣ ಎಂದು ಹೆಸರಿಡಲಾಗಿದೆ. ಹೈದರಾಬಾದ್​ನ ಚಾಪೆಲ್ ಬಜಾರ್​ನ ಲಡ್ಡು ಯಾದವ್ ಎಂಬುವವರಿಗೆ ಸೇರಿರುವ ಈ ಕೋಣವನ್ನು ಹರಿಯಾಣದ ಬಲ್ವೀರ್ ಸಿಂಗ್ ಎಂಬುವವರು ತಂದು ಪ್ರದರ್ಶಿಸಿದ್ದಾರೆ. ಈ ಕೋಣ ಇಷ್ಟು ಹೈಲೈಟ್‌ ಆಗಲು ಕಾರಣ ಏಕೆಂದರೆ ಅದಕ್ಕೆ ಹಾಕಿರುವ ಚಿನ್ನದ ಸರ!

ಸುಮಾರು 3 ಕೆ.ಜಿ ತೂಕವಿರುವ, ಒಂದೂವರೆ ಕೋಟಿ ಬೆಲೆ ಬಾಳುವ ಚಿನ್ನದ ಸರವನ್ನು ಕೋಣಕ್ಕೆ ತೊಡಿಸಲಾಗಿದೆ. ಇದೀಗ ಮಿರಮಿರ ಮಿಂಚುತ್ತಿದ್ದ ನೋಡುಗರ ಕಣ್ಮನ ಸೆಳೆಯುತ್ತಿದೆ.


Spread the love

About Laxminews 24x7

Check Also

ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮ

Spread the love ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮಕ್ಕೆ ಬೆಳಗಾವಿ ಮರಾಠಾ ಲಘು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ