Breaking News

ಇಂದಿರಾ ಗಾಂಧಿ ಪುಣ್ಯ ತಿಥಿ ಶ್ರದ್ಧಾಂಜಲಿ ಸಲ್ಲಿಸಿದ ಕಾಂಗ್ರೆಸ್‌ ನಾಯಕರು

Spread the love

ನವದೆಹಲಿ: ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ 37ನೇ ಪುಣ್ಯತಿಥಿಯ ಅಂಗವಾಗಿ ಕಾಂಗ್ರೆಸ್‌ ನಾಯಕರು ಭಾನುವಾರ ಶ್ರದ್ಧಾಂಜಲಿ ಸಲ್ಲಿಸಿದೆ.ಇಂದಿರಾ ಗಾಂಧಿ ಅವರ ಸ್ಮಾರಕ ‘ಶಕ್ತಿ ಸ್ಥಳ’ ದಲ್ಲಿ ಪುಷ್ಪನಮನ ಸಲ್ಲಿಸಲಾಯಿತು.

 

‘ಕೊನೆಯ ಗಳಿಗೆಯವರೆಗೂ ನನ್ನ ಅಜ್ಜಿ ದೇಶಕ್ಕೆ ನಿರ್ಭೀತಿಯಿಂದ ಸೇವೆ ಸಲ್ಲಿಸಿದ್ದಾರೆ. ಅವರ ಜೀವನವು ನಮಗೆ ಸ್ಪೂರ್ತಿಯ ಸೆಲೆಯಾಗಿದೆ’ ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

‘ಇಂದಿರಾ ಗಾಂಧಿ ಅವರು ಸಾಮರ್ಥ್ಯವನ್ನು ಪ್ರತಿನಿಧಿಸಿದರು, ತ್ಯಾಗವನ್ನು ಪ್ರತಿಫಲಿಸಿದರು, ಸೇವೆಯನ್ನು ಪ್ರತಿಪಾದಿಸಿದರು. ಭಾರತದ ಉಕ್ಕಿನ ಮಹಿಳೆ, ಭಾರತದ ಮೊದಲ ಮಹಿಳಾ ಪ್ರಧಾನಿ, ನಿಜವಾದ ಭಾರತ ರತ್ನವಾದ ಅವರಿಗೆ ಅವರ ಪುಣ್ಯತಿಥಿಯಂದು ಶತಕೋಟಿ ನಮನಗಳು’ ಎಂದು ಕಾಂಗ್ರೆಸ್‌ ತನ್ನ ಅಧಿಕೃತ ಟ್ವೀಟ್‌ ಖಾತೆಯಲ್ಲಿ ಗೌರವ ಸಲ್ಲಿಸಿದೆ.

ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ 1984ರಲ್ಲಿ ಇದೇ ದಿನ ತಮ್ಮ ಇಬ್ಬರು ಭದ್ರತಾ ಸಿಬ್ಬಂದಿಯಿಂದ ಹತ್ಯೆಗೀಡಾದರು.


Spread the love

About Laxminews 24x7

Check Also

ರೂ. 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ “ಅಕ್ಕ ಕೆಫೆ” ಕ್ಯಾಂಟಿನ್‌ನ ನಿರ್ಮಾಣ ಕಾಮಗಾರಿಯ ಉದ್ಘಾಟನೆ

Spread the love  ಯಮಕನಮರಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬೆಳಗಾವಿ ಸಮೀಪದ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ, ಮಹಿಳಾ ಸ್ವಾವಲಂಬಿ ಯೋಜನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ