Breaking News

‘ಕರುನಾಡಿನ ವೀರ ಕನ್ನಡಿಗ’, ಸ್ಯಾಂಡಲ್​ವುಡ್​ನ ‘ಪವರ್​ಸ್ಟಾರ್​’, ಕನ್ನಡಿಗರ ಪ್ರೀತಿಯ ಅಪ್ಪು ಇನ್ನು ನೆನಪು ಮಾತ್ರ.

Spread the love

ಬೆಂಗಳೂರು: ಅಸಂಖ್ಯಾತ ಅಭಿಮಾನಿಗಳ ಮನದಲ್ಲಿ ‘ರಾಜಕುಮಾರ’ನಂತೆ ಮೆರೆದಿದ್ದ ಕರುನಾಡಿನ ‘ಕರುನಾಡಿನ ವೀರ ಕನ್ನಡಿಗ’, ಸ್ಯಾಂಡಲ್​ವುಡ್​ನ ‘ಪವರ್​ಸ್ಟಾರ್​’, ಕನ್ನಡಿಗರ ಪ್ರೀತಿಯ ಅಪ್ಪು ಇನ್ನು ನೆನಪು ಮಾತ್ರ.

ಕಂಠೀರವ ಸ್ಟುಡಿಯೋದಲ್ಲಿ ಇಂದು ಬೆಳಗ್ಗೆ ಸಕಲ ಸರ್ಕಾರಿ ಗೌರವದೊಂದಿಗೆ ಪುನೀತ್​ ರಾಜ್​ಕುಮಾರ್​ ಅವರ ಅಂತ್ಯಕ್ರಿಯೆ ನೆರವೇರಿದ್ದು, ಕುಟುಬಂಸ್ಥರು, ಅಭಿಮಾನಗಳ ಆಕ್ರಂದ ಮುಗಿಲು ಮುಟ್ಟಿದೆ.

ಅಪ್ಪ-ಅಮ್ಮನ ಸಮಾಧಿ ಬಳಿಯೇ ಪುನೀತ್​ ಲೀನವಾಗಿದ್ದಾರೆ.

ಕಂಠೀರವ ಸ್ಟೇಡಿಯಂನಿಂದ ಹೂವಿನ ಪಲ್ಲಕ್ಕಿಯಲ್ಲಿ ಭಾನುವಾರ ಮುಂಜಾನೆಯೇ ಪುನೀತ್​ರ ಪಾರ್ಥಿವ ಶರೀರವನ್ನ ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ತರಲಾಯಿತು. ಬಳಿಕ ಈಡಿಗ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ರಾಜ್​ ಕುಟುಂಬಸ್ಥರು ಅಂತಿಮ ವಿಧಿವಿಧಾನ ನೆರವೇರಿಸಿದರು. ಇದಕ್ಕೂ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ ಅವರು ಪುನೀತ್​ರ ಹಣೆಗೆ ಮುತ್ತಿಟ್ಟು ಭಾವುಕ ವಿದಾಯ ಹೇಳಿದರು.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ