ಇತ್ತೀಚೆಗೆ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕ್ ಗೆಲುವು ಸಾಧಿಸಿತ್ತು. ಈ ಬೆನ್ನಲ್ಲೇ ಭಾರತ ವಿರುದ್ಧ ಪಾಕ್ ಗೆಲುವನ್ನು ಸಂಭ್ರಮಿಸಿದ್ದ ರಾಜಸ್ಥಾನದ ಉದಯಪುರದ ಖಾಸಗಿ ಶಾಲೆಯೊಂದರ ಶಿಕ್ಷಕಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅಲ್ಲದೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಫೀಸಾ ಅಟಾರಿ ಎಂಬಾಕೆ ಅಮಾನತು ಒಳಗಾದ ಖಾಸಗಿ ಶಾಲೆಯ ಶಿಕ್ಷಕಿ. ಈಕೆ ಉದಯಪುರದ ನೀರಜಾ ಮೋದಿ ಎಂಬ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಭಾರತದ ವಿರುದ್ಧದ ಪಾಕ್ ಗೆಲುವನ್ನು ಸಂಭ್ರಮಿಸಿ ವಾಟ್ಸಪ್ ಸ್ಟೇಟಸ್ ಹಾಕಿದ್ದರು.
‘ಜೀತ್ ಗಯಿ ಹಮಾರಾ ಟೀಮ್’ ಎಂದು ನಫೀಸಾ ಹಾಕಿದ್ದ ವಾಟ್ಸಾಪ್ ಸಂದೇಶ ಮೊದಲೇ ಭಾರತ ಸೋತ ಹತಾಶೆಯಲ್ಲಿದ್ದ ಕೋಟ್ಯಂತರ ಭಾರತೀಯರನ್ನು ಕೆರಳಿಸಿದೆ. ಕೂಡಲೇ ಜನ ನಫೀಸಾ ಗಮನಕ್ಕೂ ತರದಂತೆಯೇ ವಾಟ್ಸಾಪ್ ಸ್ಟೇಟಸ್ ಸ್ಕ್ರೀನ್ ಶಾಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡಿದ್ದಾರೆ.