ಧಾರವಾಡ: ತಂಗಿಯ ಮೇಲೆ ಮೆಣಸಿನ ಪುಡಿ ಎರಚಿ ಕೊಲೆ ಮಾಡಿ ಪರಾರಿಯಾಗಿದ್ದ ಅಣ್ಣ ಪತ್ತೆಯಾಗಿದ್ದಾನೆ. ಮಾತ್ರವಲ್ಲ ತಂಗಿಯನ್ನು ಕೊಂದ ಬಳಿಕ ಖಡ್ಗ ಹಿಡಿದು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡಿ, ಪೊಲೀಸ್ ಠಾಣೆಗೂ ತಲುಪಿದ್ದಾನೆ.
ಧಾರವಾಡದ ನವಲಗುಂದ ಪಟ್ಟಣದ ಕಲ್ಮೇಶ್ವರ ಗುಡಿ ಬಳಿ ಮಹಾಂತೇಶ ಶರಣಪ್ಪನವರ ತನ್ನ ತಂಗಿ ಶಶಿಕಲಾ ಸುಣಗಾರ ಎಂಬಾಕೆಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡು ಬಳಿಕ ಮೆಣಸಿನ ಪುಡಿ ಎರಚಿದ್ದಲ್ಲದೆ ಖಡ್ಗದಿಂದ ಕೊಲೆಗೈದು ಪರಾರಿಯಾಗಿದ್ದ.
ನಂತರ ಆತ ಖಡ್ಗ ಹಿಡಿದುಕೊಂಡು ರಸ್ತೆಯಲ್ಲಿ ರಾಜಾರೋಷವಾಗಿ ನಡೆದುಕೊಂಡು ಹೋಗುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಎಲ್ಲೆಡೆ ಹರಿದಾಡಲಾರಂಭಿಸಿದೆ. ಆತನನ್ನು ನೋಡಿ ಜನರು ಹೌಹಾರಿದ್ದ ಪ್ರಸಂಗವೂ ನಡೆದಿದೆ.
ಬಳಿಕ ಈತ ಖಡ್ಗ ಹಿಡಿದುಕೊಂಡು ನವಲಗುಂದ ಪೊಲೀಸ್ ಠಾಣೆಗೂ ಹೋಗಿದ್ದು, ಅಲ್ಲಿ ಶರಣಾಗಿದ್ದಾನೆ ಎನ್ನಲಾಗಿದೆ. ಕೊಲೆಗೆ ಕಾರಣ ಇತ್ಯಾದಿ ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
Laxmi News 24×7