Breaking News

B.S.Y. ಅವರ ಆಪ್ತನ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ ಭ್ರಷ್ಟಾಚಾರ ಬಯಲಿಗೆ ಎಳೆದರೂ ಬೊಮ್ಮಾಯಿ ಮೌನ ಯಾಕೆ?

Spread the love

ಮುಖ್ಯಮಂತ್ರಿ ಕಚೇರಿಯ ನೌಕರ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತನ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ ಭ್ರಷ್ಟಾಚಾರ ಬಯಲಿಗೆ ಎಳೆದರೂ ಬಸವರಾಜ ಬೊಮ್ಮಾಯಿ ಅವರು ಯಾಕೆ ನೈತಿಕ ಹೊಣೆ ಹೊರಲಿಲ್ಲ ಎಂದು ಕಾಂಗ್ರೆಸ್‌ ವಕ್ತಾರ ಹಾಗೂ ಪರಿಷತ್‌ನ ಮಾಜಿ ಸದಸ್ಯ ರಮೇಶ್‌ ಬಾಬು ಪ್ರಶ್ನಿಸಿದ್ದಾರೆ.

ವಿಜಯೇಂದ್ರ ಅವರನ್ನು ಹಣಿಯಲು ಬಿಜೆಪಿಯ ಮುಖಂಡರೇ ಈ ದಾಳಿಗೆ ಕಾರಣಕರ್ತರಾಗಿದ್ದು ದಾಳಿಯ ಸುಳಿವು ಮೊದಲೇ ಬಸವರಾಜ ಬೊಮ್ಮಾಯಿಯವರಿಗೆ ತಿಳಿದಿತ್ತು. ತಮ್ಮ ಕಚೇೂ ನೌಕರನೇ ದಾಳಿಗೊಳಗಾಗಿ ಕೋಟ್ಯಂತರ ರೂ. ವಶಕ್ಕೆ ಪಡೆದರೂ ಮೌನವಾಗಿರುವ ಮುಖ್ಯಮಂತ್ರಿಯವರು ಕಾಂಗ್ರೆಸ್‌ನ ನೈತಿಕತೆ ಪ್ರಶ್ನಿಸುವ ಶಕ್ತಿ ಉಳಿಸಿಕೊಂಡಿದ್ದಾರೆಯೇ ಎಂದು ಕೇಳಿದ್ದಾರೆ.

 

ಬಿಜೆಪಿ ಹೈಕಮಾಂಡ್‌ ಮತ್ತು ಆರ್‌ಎಸ್‌ಎಸ್‌ ನೆರಳಲ್ಲೇ ಮುಖ್ಯಮಂತ್ರಿ ಪದವಿಯನ್ನು ಅನುಭವಿಸುತ್ತಿರುವ ಮುಖ್ಯಮಂತ್ರಿಯವರು ಸಚಿವ ಸಮಪುಟದಲ್ಲಿ ಸಚಿವರ ಸೇರ್ಪಡೆ ಅಥವಾ ಖಾತೆಬದಲಾವಣೆಗೆ ಅಸಹಾಯಕತೆ ತೋರಿ ಕೈಚೆಲ್ಲಿದ ಕಟುಸತ್ಯ ಇಡಿಇ ರಾಜ್ಯದ ಜನ ನೋಡಿದ್ದಾರೆ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ನಮಗೆ ಇ.ಡಿ ಸಮನ್ಸ್ ಮೂಲಕ ಕಿರುಕುಳ ನೀಡಲಾಗುತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

Spread the loveಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್ ನೀಡಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ