Breaking News
Home / ರಾಜಕೀಯ / ಗಗನ ಮುಟ್ಟಿದ ತರಕಾರಿಗಳ ಬೆಲೆ

ಗಗನ ಮುಟ್ಟಿದ ತರಕಾರಿಗಳ ಬೆಲೆ

Spread the love

ತುಮಕೂರು: ಕಳೆದ ವಾರ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಈ ವಾರ ಬಹುತೇಕ ತರಕಾರಿಗಳ ಧಾರಣೆ ಗಗನ ಮುಟ್ಟಿದೆ. ಹಾಗಲಕಾಯಿ ಹೊರತುಪಡಿಸಿದರೆ ಎಲ್ಲಾ ತರಕಾರಿ ಹಾಗೂ ಸೊಪ್ಪಿನ ಬೆಲೆ ದುಬಾರಿಯಾಗಿದೆ.

ಬೀನ್ಸ್ ಕೆ.ಜಿ ₹30-35 ಇದ್ದದ್ದು, ಒಮ್ಮೆಲೆ ₹60ಕ್ಕೆ ಜಿಗಿದಿದೆ. ಅಂತರಸನಹಳ್ಳಿ ಮಾರುಕಟ್ಟೆಯಲ್ಲೇ ಧಾರಣೆ ದುಪ್ಪಟ್ಟಾಗಿದ್ದರೆ, ಚಿಲ್ಲರೆಯಾಗಿ ಕೆ.ಜಿ ₹80-100ಕ್ಕೆ ಮಾರಾಟವಾಗುತ್ತಿದೆ. ಕ್ಯಾರೇಟ್, ಬೀಟ್ರೂಟ್, ಗೆಡ್ಡೆಕೋಸು, ಹೂ ಕೋಸು ಸೇರಿದಂತೆ ಸಾಕಷ್ಟು ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ. ಈರುಳ್ಳಿ, ಟೊಮೆಟೊ ಹಿಂದಿನ ವಾರಕ್ಕಿಂತ ಮತ್ತಷ್ಟು ಏರಿಕೆ ಕಂಡಿದೆ.

ಸೊಪ್ಪು ಸಹ ತರಕಾರಿ ಹಿಂಬಾಲಿಸಿದ್ದು, ಬೆಲೆ ಎರಡು ಪಟ್ಟು ಹೆಚ್ಚಳವಾಗಿದ್ದು, ಮತ್ತೂ ದುಬಾರಿಯಾಗುತ್ತಲೇ ಸಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ.ಗೆ ₹40 ಹೆಚ್ಚಳವಾಗಿದ್ದು, ಕೆ.ಜಿ ₹80ಕ್ಕೆ, ಸಬ್ಬಕ್ಕಿ ಸೊಪ್ಪು ಸಹ ಕೆ.ಜಿ.ಗೆ ₹30 ಏರಿಕೆಯಾಗಿದ್ದು, ₹60ಕ್ಕೆ ತಲುಪಿದೆ. ಪಾಲಕ್ ಸೊಪ್ಪು ಕೆ.ಜಿ ₹50ಕ್ಕೆ, ಮೆಂತ್ಯ ಸೊಪ್ಪು ಕೆ.ಜಿ ₹80ಕ್ಕೆ ಏರಿಕೆ ಕಂಡಿದೆ. ಚಿಲ್ಲರೆಯಾಗಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಕಳೆದ ಎಂಟತ್ತು ದಿನಗಳಿಂದ ಸತತವಾಗಿ ಮಳೆಯಾಗುತ್ತಿದ್ದು, ತರಕಾರಿಗಳು ಗಿಡದಲ್ಲೇ ಕೊಳೆಯುತ್ತಿವೆ. ಗಿಡದಿಂದ ಬಿಡಿಸಿ ಮಾರುಕಟ್ಟೆಗೆ ಸಾಗಿಸುವುದು ಕಷ್ಟಕರವಾಗಿದೆ. ಸೊಪ್ಪು ಕೊಳೆತು ಹಾಳಾಗಿದ್ದು, ಮಾರುಕಟ್ಟೆಗೆ ಬರುವುದು ಕಡಿಮೆಯಾಗಿದೆ. ಹಾಗಾಗಿ, ಬೆಲೆ ಹೆಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ.

ಧಾನ್ಯಗಳ ಬೆಲೆಯಲ್ಲಿ ಅತ್ಯಲ್ಪ ಏರಿಳಿತವಾಗಿದೆ. ಕಡಲೆ ಬೀಜ ಕೆ.ಜಿ.ಗೆ ₹10 ಹೆಚ್ಚಳವಾಗಿದ್ದು, ಉದ್ದಿನ ಬೇಳೆ ಅಲ್ಪ ಏರಿಕೆಯಾಗಿದ್ದರೆ, ಹೆಸರು ಕಾಳಿನ ಬೆಲೆ ಕೊಂಚ ಇಳಿಕೆಯಾಗಿದೆ. ಹಣ್ಣುಗಳ ಧಾರಣೆ ಬಹುತೇಕ ಸ್ಥಿರವಾಗಿದ್ದು, ಸೇಬಿನ ಬೆಲೆ ಅಲ್ಪ ಕಡಿಮೆಯಾಗಿದ್ದರೆ, ದಾಳಿಂಬೆ, ಸಪೋಟ ದರ ಸಹ ತಗ್ಗಿದೆ. ಇತರ ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ