Breaking News

ಸಿಎಂ ಬೊಮ್ಮಾಯಿ ನವೆಂಬರ್​ವರೆಗೆ ಮಾತ್ರ ಅಧಿಕಾರದಲ್ಲಿ ಇರುತ್ತಾರೆ: ಸಿಎಂ ಇಬ್ರಾಹಿಂ

Spread the love

ತುಮಕೂರು: ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ತುಮಕೂರಿನಲ್ಲಿ ಮಾತನಾಡಿದ್ದು ಸಿಎಂ ಬೊಮ್ಮಾಯಿ ನವೆಂಬರ್​ವರೆಗೆ ಮಾತ್ರ ಅಧಿಕಾರದಲ್ಲಿ ಇರುತ್ತಾರೆ ಎಂದು ಹೇಳಿದ್ದಾರೆ.

ಈ ಕುರಿತು ಭವಿಷ್ಯ ನುಡಿದ ಇಬ್ರಾಹಿಂ.. ಕೇಶವಕೃಪಾದವರು ಯಡಿಯೂರಪ್ಪಗೇ ಬಿಟ್ಟಿಲ್ಲ.. ಬೊಮ್ಮಾಯಿಗೆ ಬಿಡುತ್ತಾರಾ.? ಬೊಮ್ಮಾಯಿ ಏನು ಮಾಡಿದರೂ ಅವರು ಒಪ್ಪಲ್ಲ. ಬಸವ ತತ್ವದ ಮೇಲೆ ಅಧಿಕಾರ ನಡೆಸೋದಾದರೆ ನಡೆಸಿ.. ಇಲ್ಲಾ ಅಂದರೆ ಅಧಿಕಾರದಿಂದ ಕೆಳಗಿಳೀರಿ ಎಂದು ಇಬ್ರಾಹಿಂ ಹೇಳಿದ್ದಾರೆ.

ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಮಾತನಾಡಿ.. ಇದಕ್ಕೆ ನಮ್ಮ ವಿರೋಧ ಇಲ್ಲ.. ಚಾಣಕ್ಯರ ನೀತಿ ಅನುಸರಿಸಿ ಇವರು ವಿಶ್ವವಿದ್ಯಾಲಯ ಸ್ಥಾಪಿಸಲಿ. ಚಾಣಕ್ಯ ಪ್ರಜೆಗಳು ಮತ್ತು ರೈತರ ಬಗ್ಗೆ ಕಳಕಳಿ ಹೊಂದಿದ್ದರು. ಚಾಣಕ್ಯ ನೀತಿ ಅನ್ವಯ ಇವರು ವಿಶ್ವವಿದ್ಯಾಲಯ ಸ್ಥಾಪಿಸಲಿ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 2 ವರ್ಷ ದಲಿತ ಸಿಎಂ ಮತ್ತೆ 2 ವರ್ಷ ಮುಸ್ಲಿಂ ಸಿಎಂ ಎಂದು ಘೋಷಣೆ ಮಾಡಲಿ

ಚಾಣಕ್ಯ ಯುನಿವರ್ಸಿಟಿ ಬೇಡ ಎನ್ನುವ ಸಿದ್ದರಾಮಯ್ಯ ದೊಡ್ಡವರು. ಅವರ ಬಗ್ಗೆ ನಾನು ಏನೂ ಹೇಳಲ್ಲ ಹಾಗೇ ಟಿಪ್ಪು ಸುಲ್ತಾನ್ ಯುನಿವರ್ಸಿಟಿ ನೂ ಮಾಡಲಿ. ರಾಜ್ಯದ ಯಾವುದಾದರೂ ಕೇಂದ್ರ ಸ್ಥಾನದಲ್ಲಿ ಸ್ಥಾಪಿಸಲಿ. 200-300 ಎಕರೆ ಜಾಗವನ್ನ ಸರ್ಕಾರ ನೀಡಲಿ. ಕಾಂಗ್ರೆಸ್​ನಲ್ಲಿ ಅಲ್ಪಸಂಖ್ಯಾತರಿಗೆ ಸರಿಯಾದ ಪ್ರಾತಿನಿಧ್ಯ ಸಿಗುತಿಲ್ಲ. ಮುಸ್ಲಿಂ ಸಮುದಾಯದವರನ್ನು ಸಿಎಂ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಣೆ ಮಾಡಲಿ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 2 ವರ್ಷ ದಲಿತ ಸಿಎಂ ಮತ್ತೆ 2 ವರ್ಷ ಮುಸ್ಲಿಂ ಸಿಎಂ ಎಂದು ಘೋಷಣೆ ಮಾಡಲಿ.

ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಿಸಿದ್ದು ರಾಜಕೀಯಕ್ಕೋಸ್ಕರ. ನಾನು ಆವತ್ತೇ ಜಯಂತಿ ವಿರೋಧಿಸಿದೆ. ನಮ್ಮಲ್ಲಿ ಜಯಂತಿ ಆಚರಣೆ ಪದ್ದತಿ ಇಲ್ಲ. ಫೋಟೋಗೆ ಹಾರ ಹಾಕಿ ಪೂಜೆ ಮಾಡುವ ಪದ್ದತಿ ನಮ್ಮಲ್ಲಿ ಇಲ್ಲ. ಬಾಜ ಭಜಂತ್ರಿ ಬಾರಿಸುವ ಸಂಸ್ಕೃತಿನೂ ಇಲ್ಲ ಎಂದಿದ್ದಾರೆ.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ