Breaking News

ಸಿಎಸ್​ಕೆ ‘ಕನಸು ನನಸು’ ಮಾಡಿದ MSD; ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದ ಕೆಕೆಆರ್

Spread the love

14ನೇ ಐಪಿಎಲ್ ಆವೃತ್ತಿಯಲ್ಲಿ ಧೋನಿ ಬಾಯ್ಸ್ ಗೆದ್ದು ಬೀಗಿದ್ದಾರೆ. ಸಿಎಸ್‌ಕೆ ಅಬ್ಬರದ ಆಟಕ್ಕೆ ಶಾರೂಖ್​​​ ಹುಡುಗರು ಮುಗ್ಗರಿಸಿದ್ದಾರೆ. ಅದ್ಬುತ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ 4ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ನಾಲ್ಕನೇ ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟ ಚೆನ್ನೈ
ಮೂರನೇ ಬಾರಿ ಟ್ರೋಪಿ ಗೆಲ್ಲುವ ಕೆಕೆಆರ್ ಕನಸು ಭಗ್ನ

ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ಸಿಎಸ್‌ಕೆ ತಂಡ ಐಪಿಎಲ್ 2021ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿ ಚೆನ್ನೈ ನಾಲ್ಕನೇ ಬಾರಿಗೆ ಐಪಿಎಲ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್​ಗಳಲ್ಲಿ 3 ವಿಕೆಟ್​ಗೆ 192 ರನ್​ಗಳ ಬೃಹತ್ ಸ್ಕೋರ್ ಕಲೆ ಹಾಕಿತು. ಈ ಮೂಲಕ ಕೆಕೆಆರ್‌ಗೆ ಬೃಹತ್ ಮೊತ್ತದ ಗುರಿಯನ್ನೇ ನೀಡಿತು.

ಸಿಎಸ್‌ಕೆ ಅಬ್ಬರದ ಆಟ
ಐಪಿಎಲ್ ಫೈನಲ್​ ಫೈಟ್​ನಲ್ಲಿ ಟಾಸ್​​ ಗೆದ್ದ ಕೆಕೆಆರ್ ತಂಡದ ನಾಯಕ ಮಾರ್ಗನ್ ಚೆನ್ನೈ ತಂಡವನ್ನ ಬ್ಯಾಟಿಂಗ್​ಗೆ ಆಹ್ವಾನಿಸಿದ್ರು. ​ಚೆನ್ನೈಗೆ ಡು ಪ್ಲೆಸಿಸ್​,​ ಋತುರಾಜ್ ಗಾಯಕ್ವಾಡ್ ಡಿಸೇಂಟ್​​ ಆರಂಭ ನೀಡಿದ್ರು. ಆದ್ರೆ, ​9ನೇ ಓವರ್​​​ ಬೌಲಿಂಗ್​ ಮಾಡಿದ ಸುನಿಲ್​ ನರೇನ್​ ಮೊದಲ ಬ್ರೇಕ್​ ಥ್ರೂ ಕೊಟ್ರು. ಬಳಿಕ ಅಬ್ಬರಿಸಿದ ಉತ್ತಪ್ಪ 15 ಎಸೆತಕ್ಕೆ 3 ಸಿಕ್ಸರ್​ ಸಹಿತ 31 ರನ್​ಗಳಿಸಿ ಹೊರನಡೆದ್ರು. ಇದಾದ ಬಳಿಕ ಮೊಯಿನ್​ ಆಲಿ- ಡು ಪ್ಲೆಸಿಸ್​​ ಜೋಡಿ ರನ್​ವೇಗ ಹೆಚ್ಚಿಸಿತು. ಕೇವಲ 39 ಎಸೆತಗಳಲ್ಲಿ 68 ರನ್​ ಕಲೆಹಾಕಿದ ಈ ಜೋಡಿ ಅಂತಿಮವಾಗಿ ಕೆಕೆಆರ್‌ಗೆ 192 ರನ್​ಗಳ ಗುರಿ ನೀಡಿತು.

ಕ್ಯಾಪ್ಟನ್ ಕೂಲ್ ಧೋನಿ ಹುಡುಗರು ನೀಡಿದ ಬೃಹತ್‌ ಮೊತ್ತದ ಬೆನ್ನಟ್ಟಿದ ಕೆಕೆಆರ್‌ ಉತ್ತಮ ಆರಂಭವನ್ನೆ ಪಡೆದಿತ್ತು. ಆದ್ರೆ ಬಳಿಕ ಸೋಲಿನ ಹಾದಿ ತುಳಿಯಬೇಕಾಯ್ತು.

ಮುಗ್ಗರಿಸಿದ ಕೆಕೆಆರ್
ಚೆನ್ನೈ ನೀಡಿದ ಸವಾಲಿನ ಟಾರ್ಗೆಟ್​​ ಬೆನ್ನತ್ತಿದ ಕೊಲ್ಕತ್ತಾ ಸಿಕ್ಕ ಅದೃಷ್ಠದ ಅವಕಾಶ ಬಳಸಿಕೊಂಡು ಭರ್ಜರಿ ಆರಂಭ ಪಡೆಯಿತು. ತಂಡಕ್ಕೆ ವೇಂಕಟೇಶ್ ಅಯ್ಯರ್​​-ಶುಭ್‌ಮನ್‌ ಗಿಲ್ ಗೆಲುವಿನ ಭರವಸೆ ಮೂಡಿಸಿದ್ರು. ಆದ್ರೆ ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ವೆಂಕಟೇಶ್​ ಅಯ್ಯರ್‌ಗೆ​ ಬ್ರೇಕ್ ಹಾಕಿದ ಶಾರ್ದೂಲ್​ ಠಾಕೂರ್​ ಮೊದಲ ಬ್ರೇಕ್​ ಥ್ರೂ ನೀಡಿದ್ರು. ಅಯ್ಯರ್​ ಬೆನ್ನಲ್ಲೇ ದೀಪಕ್​ ಚಹರ್​​ ಬಾಲ್‌ಗೆ ಗಿಲ್ ಬಲಿಯಾದ್ರು. ಇದಾದ ನಂತರ ಮಿಡಲ್​ ಆರ್ಡರ್​ ಬ್ಯಾಟ್ಸ್​ಮನ್ಸ್ ಅಕ್ಷರಷಃ ಮುಗ್ಗರಿಸಿದ್ರು. ಅಂತಿಮ ಹಂತದಲ್ಲಿ ಶಿವಂ ಮಾವಿ, ಫರ್ಗ್ಯೂಸನ್​ ಅಬ್ಬರಿಸಿದ್ರು. ಆದ್ರೆ, ಅವ್ರು ಕೂಡ ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದ್ರು, ತಂಡ 20 ಓವರ್​​​ಗಳಲ್ಲಿ 165ರನ್​ ಗಳಿಸಿ, ಅಂತಿಮವಾಗಿ ಸಿಎಸ್‌ಕೆ ಎದುರು ಸೋಲು ಒಪ್ಪಿಕೊಂಡಿತು.

ಅಂತಿಮವಾಗಿ ಧೋನಿ ಪಡೆ 27 ರನ್​ಗಳ ಜಯ ದಾಖಲಿಸಿತು. ಇದರೊಂದಿಗೆ ಸಿಎಸ್‌ಕೆ 4ನೇ ಬಾರಿ ಐಪಿಎಲ್​ ಚಾಂಪಿಯನ್​ ಪಟ್ಟಕ್ಕೇರಿ ದಾಖಲೆ ಬರೆಯಿತು. 3ನೇ ಬಾರಿ ಟ್ರೋಪಿಗೆ ಮುತ್ತಿಕ್ಕುವ ಕೆಕೆಆರ್ ಕನಸು ಕನಸಾಗಿಯೇ ಉಳಿಯಿತು.


Spread the love

About Laxminews 24x7

Check Also

ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು

Spread the love ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ