ಬೆಂಗಳೂರು: ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಅವರ ಹೆಸರಿನಲ್ಲಿ ಪಾಸ್ ಸೃಷ್ಟಿಸಿಕೊಂಡು ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಈ ಸಂಬಂಧ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ತೇಜಸ್ವಿನಿ ಗೌಡ ಅವರ ಮಗಳು ಬಿ.ಎಸ್. ಯಶಸ್ವಿನಿ ದೂರು ನೀಡಿದ್ದಾರೆ. ಹುಂಡೈ ಐ- 20 (ಕೆಎ 03 ಎಂವೈ 6331) ಕಾರಿನ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನನ್ನು ಪತ್ತೆ ಮಾಡಿ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ಹೇಳಿದರು.
‘ತೇಜಸ್ವಿನಿ ಗೌಡ ಅವರು ಯಾರಿಗೂ ಪಾಸ್ ನೀಡಿಲ್ಲ. ಅಷ್ಟಾದರೂ ಅವರ ಹೆಸರಿನಲ್ಲಿ ಪಾಸ್ ಸೃಷ್ಟಿಸಿಕೊಂಡಿರುವ ಕಾರಿನ ಮಾಲೀಕ, ಅದನ್ನು ಕಾರಿನ ಮುಂಭಾಗದಲ್ಲಿ ಹಾಕಿಕೊಂಡಿದ್ದಾನೆ. ಸದಸ್ಯೆ ಹೆಸರಿಗೆ ಧಕ್ಕೆ ತರುತ್ತಿದ್ದಾನೆಂದು ಆರೋಪಿಸಲಾಗಿದೆ’ ಎಂದೂ ತಿಳಿಸಿದರು.
Laxmi News 24×7