Breaking News

‘ತಂಪು ಪಾನಿ ಪ್ರಿಯರು’ ಓದಲೇಬೇಕಾದ ಸ್ಟೋರಿ.. ಸ್ವಲ್ಪ ಯಾಮಾರಿದ್ರೂ ಆರೋಗ್ಯಕ್ಕೆ ಬರುತ್ತೆ ಕುತ್ತು ಹುಷಾರ್..!

Spread the love

ಬೆಂಗಳೂರು: ತಂಪು ಪಾನಿ (cold drinks) ಪ್ರಿಯರೇ ಹುಷಾರ್​.. ನೀವು ತಂಪು ಪಾನೀಯಗಳ ಪ್ರಿಯರಾಗಿದ್ದರೆ ನೀವು ಈ ಸ್ಟೋರಿ ಓದಲೇ ಬೇಕು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹಲವಾರು ಕಂಪನಿಯ ಕಲರ್​ ಕಲರ್​ ತಂಪು ಪಾನೀಯಗಳು ದಿನಕ್ಕೊಂದು ಹೆಸರಿನಲ್ಲಿ ಲಗ್ಗೆ ಇಡುತ್ತೀವೆ. ಆದರೆ ಸದ್ಯ ಈ ಪಾನೀಯಗಳ ಅಸಲಿ ದಂಧೆ ಬಯಲಾಗುತ್ತಿದ್ದು ನಗರದಲ್ಲಿ ಬಳಕೆಯ ಸಮಯ (Expiry Date) ಮುಗಿದ ಪಾನೀಯಗಳನ್ನು ಪುನಃ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ಹೌದು ಪ್ರಸಿದ್ಧ ತಂಪು ಪಾನೀಯ ಬ್ರಾಂಡ್​ ಆದ ಪೆಪ್ಸಿ ಕಂಪನಿಯು ತನ್ನ ಅವಧಿ ಮುಗಿದ ಪಾನೀಯಗಳ ಮೇಲಿನ ದಿನಾಂಕವನ್ನು ಅಳಿಸಿ ಹೊಸ ದಿನಾಂಕವನ್ನ ಮುದ್ರಿಸಿ ಪುನಃ ಮಾರುಕಟ್ಟಗೆ ಕಳುಹಿತ್ತಿದೆ ಎಂಬ ಗಂಭಿರ ಆರೋಪ ಕೇಳಿ ಬಂದಿದೆ.

ಕೋವಿಡ್​ ಕಾರಣದಿಂದ ಲಾಕ್​ಡೌನ್​ ಸಮಯದಲ್ಲಿ ಅಂಗಡಿ ಮುಂಗಟ್ಟುಗಳೆಲ್ಲವು ಬಂದ್​ ಆಗಿದ್ದವು. ಈ ಸಮಯದಲ್ಲಿ ಇವುಗಳಿಗೆ ಯಾವುದೇ ಬೇಡಿಕೆ ಇರಲಿಲ್ಲ. ಈಂತಹ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸ್ಟಾಕ್​ ಬಿಕರಿಯಾಗದೇ ಹಾಗೇ ಉಳಿದಿದೆ. ಉತ್ಪಾದನಾ ಘಟಕದಲ್ಲೇ ಉಳಿದ ಪೆಪ್ಸಿ, ಮತ್ತು ಇನ್ನಿತರ ಹಣ್ಣಿನ ಜ್ಯೂಸ್​ಗಳ ಬಳಕೆಯ ಅವಧಿ ಅಳಿಸಿ ಹೊಸ ಅವಧಿ ಪ್ರಿಂಟ್​ ಮಾಡಿ ಮಾರುಕಟ್ಟೆಗೆ ಸಾಗಾಟ ಮಾಡಲಾಗಿದೆ ಎಂದು ಖಾಸಗಿ ಸಂಸ್ಥೆಯ ಸಿಬ್ಬಂದಿಯೊಬ್ಬರು ಆರೋಪಿಸಿದ್ದಾರೆ.

ಇನ್ನು ಈ ರೀತಿಯ ಕಳ್ಳ ವ್ಯವಹಾರವನ್ನ ಪ್ರಶ್ನಿಸಿದ್ದಕ್ಕೆ ಸಿಬ್ಬಂದಿಯ ಮೇಲೆ ನಾನಾ ರೀತಿಯ ತೊಂದರೆ ಕೊಡಲಾಗಿದೆ ಎನ್ನಲಾಗಿದೆ. ಆ ಮೂಲಕ ಪ್ರತಿಷ್ಠಿತ ಕಂಪನಿಯೊಂದು ಹಣದಾಸೆಗಾಗಿ ಗ್ರಾಹಕರ ಹಿತವನ್ನ ಕಾಯದೇ ಫುಡ್​ ಫ್ರಾಂಡಿಂಗ್​ ನಲ್ಲಿ ಭಾಗಿಯಾಯ್ತಾ ಎಂಬ ಸಂಶಯಗಳು ಹುಟ್ಟಿಕೊಂಡಿವೆ. ಇನ್ನು ಕಂಡ ಕಂಡಲ್ಲಿ ಹಿಂದು ಮುಂದೆ ನೋಡದೇ ಪಾನೀಯಗಳನ್ನು ಗಂಟಲಕ್ಕಿಳಿಸುವುವ ನಾವುಗಳು ಇನ್ಮುಂದೆ ಎಚ್ಚೆತ್ತುಕೊಳ್ಳಬೇಕಾಗಿದೆ ಅಷ್ಟೇ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ