ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರ್ಸಂಟೇಜ್ ರಾಜಕಾರಣಿ ಅಲ್ಲ ಅನ್ನೋ ಮೂಲಕ ಮಾಜಿ ಸಂಸದ ವಿಎಸ್ ಉಗ್ರಪ್ಪ ಯೂಟರ್ನ್ ಹೊಡೆದಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಚರ್ಚೆಯೊಂದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹಾಗೂ ಮಾಜಿ ಸಂಸದ ಉಗ್ರಪ್ಪ ನಡುವೆ ನಡೆದ ಸಂಭಾಷಣೆಯಲ್ಲಿ ಡಿ.ಕೆ.ಶಿವಕುಮಾರ್, ‘ಕಲೆಕ್ಷನ್ ಗಿರಾಕಿ’ ಎಂದು ಸಲೀಂ ಹೇಳಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದ್ದಂತೆ ಮಾಜಿ ಸಂಸದ ವಿಎಸ್ ಉಗ್ರಪ್ಪ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನಿಡುವ ಪ್ರಯತ್ನ ಮಾಡಿದರು.
ಉಗ್ರಪ್ಪ ಹೇಳಿದ್ದೇನು..?
- ಕಾಂಗ್ರೆಸ್ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಕಾಂಗ್ರೆಸ್ ಒಂದೇ
- ಡಿಕೆಎಸ್, ಶಿವಕುಮಾರ್, ಖರ್ಗೆ, ಪರಮೇಶ್ವರ್ ಎಲ್ಲರೂ ಒಗ್ಗಟ್ಟಿನಿಂದ ಇದೆ, ಮತ್ತೆ ಅಧಿಕಾರಕ್ಕೆ ತರುವ ಪ್ರಯತ್ನ ನಡೆಯುತ್ತಿದೆ
- ಶಿವಕುಮಾರ್ ಅವರು ಅತ್ಯಂತ ಕ್ರಿಯಾಶೀಲ, ಜನಪರವಾದ ರಾಜಕಾರಣಿ. ರೈತ ಕುಟುಂಬಂದಿಂದ ಹುಟ್ಟಿ, ರಾಜ್ಯದ ನಾಯಕರಾಗಿ ಹೊರಹೊಮ್ಮಿದ್ದಾರೆ.
- ಸುದ್ದಿಗೋಷ್ಠಿ ನಡೆಸಬೇಕಾದರೆ ನನ್ನ ಕಿವಿಯಲ್ಲಿ ಒಂದಿಷ್ಟು ಗುಣುಗಿದರು.
- ಜಲಸಂಪನ್ಮೂಲ ಇಲಾಖೆಯಲ್ಲಿ ನಡೆಯುತ್ತಿರುವ ಹಗರಣದ ಬಗ್ಗೆ ಮಾತನಾಡಿದು. ಅದು ಕೂಡ ಜನ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದು
- ಸುದ್ದಿಗೋಷ್ಠಿ ಮುಗಿದ ಬಳಿಕ ಅವರಿಗೆ ಡೀಟೇಲ್ಸ್ ಆಗಿ ಹೇಳಿದ್ದೇನೆ.. ಡಿಕೆಎಸ್ ಉತ್ತಮ ಆಡಳಿತಗಾರರು, ಅವರು ಏನಾದರೂ ಆಸ್ತಿಗಳಿದ್ರೆ ರಾಜಕಾರಣದಿಂದ ಅಲ್ಲ. ಅವರ ವಹಿವಾಟು, ವ್ಯಾಪಾರದಿಂದ ಅಲ್ಲ
- ಡಿಕೆಎಸ್ ಎಂದೂ ಪರ್ಸಂಟೇಜ್ ರಾಜಕಾರಣಿ ಅಲ್ಲ