Breaking News

ವೀಕ್‌ಎಂಡ್‌ ಹುಮಸ್ಸಿನಲ್ಲಿದ್ದ ಜನರಿಗೆ ಕಿರಿಕಿರಿ ಉಂಟು ಮಾಡಿದ ಮಳೆ

Spread the love

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಭಾನುವಾರ ನಗರದಲ್ಲಿ ಬೆಳಗ್ಗೆಯಿಂದಲೇ ಮಳೆ ಸುರಿದ ಕಾರಣ ವೀಕ್‌ಎಂಡ್‌ ಹುಮಸ್ಸಿನಲ್ಲಿದ್ದವರಿಗೆ ಕಿರಿಕಿರಿ ಉಂಟು ಮಾಡಿತು.

ಮಳೆಯಿಂದಗಾಗಿ ರಾಜಧಾನಿಯ ರಸ್ತೆಗಳು ಜಲಾವೃತಗೊಂಡಿದ್ದವು. ಜತೆಗೆ ಮ್ಯಾನ್‌ ಹೋಲ್‌ಗ‌ಳು ಕೂಡ ಉಕ್ಕಿಹರಿದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವಂತಾಯಿತು.

ಗಾಳಿಸಹಿತ ಮಳೆ ಸುರಿದ ಹಿನ್ನೆಲೆಯಲ್ಲಿ ತಿಪ್ಪಸಂದ್ರ, ಪುಷ್ಪಾಂಜಲಿ ಚಿತ್ರಮಂದಿರ, ಕರಿರೇನಹಳ್ಳಿ, ಮತ್ತು ವೆಸ್ಟ್‌ ಆಫ್ ಕಾರ್ಡ್‌ ರಸ್ತೆಗಳಲ್ಲಿ ಮರಗಳು ಉರುಳಿ ಬಿದ್ದಿದ್ದು ಬಿಬಿಎಂಪಿ ಅಧಿಕಾರಿಗಳು ಮರಗಳ ತೆರವು ಕಾರ್ಯಾಚರಣೆ ನಡೆಸಿದರು.

ಜಯನಗರ, ಜೆಪಿನಗರ,ಶಾಂತಿನಗರ,ಶಿವಾಜಿ ನಗರ,ದೊರೆಸ್ವಾಮಿ ಪಾಳ್ಯ,ಜಕ್ಕೂರು, ಬೇಗೂರು,ಬಸವೇಶ್ವರ ನಗರ, ಪಟ್ಟಾಭಿ ರಾಮನಗರ, ಯಲಹಂಕ, ಮಾದನಾಯಕನಹಳ್ಳಿ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಭಾನುವಾರ ಮಳೆಯಾಗಿದೆ.ದೊರೆಸ್ವಾಮಿ ಪಾಳ್ಯದಲ್ಲಿ 34.5 ಮೀ.ಮಿ, ಬೆಳ್ಳಂದೂರಿನಲ್ಲಿ 28 ಮೀ.ಮಿ, ಬೇಗೂರಿನಲ್ಲಿ 25 ಮೀ.ಮಿ,ನಂದಿನ ಲೇಔಟ್‌ನಲ್ಲಿ 29.5 ಮೀ.ಮಿ,ಬನಸವೇಶ್ವರ ನಗರದಲ್ಲಿ 29 ಮೀ.ಮಿ, ಚಿಕ್ಕಲ್ಲಸಂದ್ರದಲ್ಲಿ 25 ಮೀ.ಮಿ, ಮಾದನಾಯಕನಹಳ್ಳಿಯಲ್ಲಿ 29.5 ಮೀ.ಮಿ ಮಳೆ ಸುರಿದಿದೆ.

ಹಾಗೆಯೇ ಅನೇಕಲ್‌ ತಾಲೂಕಿನ ಹುಸ್ಕೂರ್‌ ನಲ್ಲಿ 34 ಮೀ.ಮಿ, ಪೀಣ್ಯಾ ದಾಸರಹಳ್ಳಿಯಲ್ಲಿ 29 ಮೀ,ಮಿ, ಮಾರುತಿ ಮಂದಿರ ವ್ಯಾಪ್ತಿಯಲ್ಲಿ 17 ಮೀ.ಮಿ, ಬಾಗಲು ಗುಂಟೆ ವ್ಯಾಪ್ತಿಯಲ್ಲಿ 18 ಮೀ.ಮಿ, ಗಾಳಿ ಆಂಜನೇಯ ದೇವಸ್ಥಾನ ವ್ಯಾಪ್ತಿಯಲ್ಲಿ 16 ಮೀ,ಮಿ, ಆರ್‌.ಆರ್‌.ನಗರ ಎಚ್‌ಎಂಟಿ ಲೇ ಔಟ್‌ ವ್ಯಾಪ್ತಿಯಲ್ಲಿ 25 ಮತ್ತು ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ 33 ಮೀ,ಮಿ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ಇನ್ನೂ ಎರಡೂ¾ರ ದಿನ ಮಳೆ ನಗರದಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


Spread the love

About Laxminews 24x7

Check Also

ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು

Spread the love ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ