Breaking News

ಪ್ರಧಾನಿ ಮೋದಿ ಬಡವರನ್ನ ಮರೆಯೊಲ್ಲ : ಸಿಎಂ ಬೊಮ್ಮಾಯಿ

Spread the love

ಬೆಂಗಳೂರು: 70 ವರ್ಷದಲ್ಲಿ ಯಾರಾದರು ಪ್ರಧಾನಿಗಳು ಬಡವರ ಔಷಧಿ ಬಗ್ಗೆ ಯೋಚನೆ ಮಾಡಿದ್ದರಾ ? ಎಂದು ಪ್ರಶ್ನಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು.ಜನೌಷಧ ಅನುಷ್ಠಾನ ಮಾಡೋದು ಸುಲಭವಲ್ಲ. ಆದರೆ, ಮೋದಿಯವರು ಅದನ್ನು ಯಶಸ್ವಿಯಾಗಿ ಮಾಡಿದ್ದಾರೆ ಎಂದರು.

ಭಾನುವಾರ ಬಸವನಗುಡಿಯ ಜನೌಷಧಿ ಕೇಂದ್ರಕ್ಕೆ ಭೇಟಿ‌ ನೀಡಿ ಮಾತನಾಡಿದ ಬೊಮ್ಮಾಯಿ, ಪ್ರಧಾನಿ ಮೋದಿಯವರು ಇಂಜಿನ್ ಹಾಗೆ ದೇಶವನ್ನು ಮುಂದೆ ನಿಂತು ನಡೆಸುತ್ತಾರೆ. ನಮ್ಮ ಪ್ರಧಾನಿ ಬಡವರಲ್ಲಿ ಬಡವರನ್ನ ಮರೆಯೊಲ್ಲ. ಅದಕ್ಕೆ ಉದಾಹರಣೆ ಜನೌಷಧಿ. ಅನಂತ್‌ಕುಮಾರ್ ಇದ್ದಾಗ ಪ್ರಾರಂಭವಾಗಿ‌ ಈಗ ಅನುಷ್ಠಾನವಾಗುತ್ತಿದೆ ಎಂದರು.

ಸಂಸದ ತೇಜಸ್ವಿ ಸೂರ್ಯ ಅವರು ಪ್ರತಿನಿಧಿಸುತ್ತಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 62 ಜನೌಶಧಿ ಕೇಂದ್ರಗಳಿವೆ. ಅವುಗಳನ್ನು 100 ಮಾಡಿಕೊಡ್ತೀನಿ ಎನ್ನುವ ಭರವಸೆ ನೀಡಿದ್ದೀನಿ. ನಾನು ಈಗ ಇದುನ್ನ ನೋಡೊಕೆ ಬಂದಿದ್ದೆ. ಬಸವನಗುಡಿ ಜನ ಇಡೀ ಕರ್ನಾಟಕದಕ್ಕೆ ಮಾದರಿ. ಇಂತಹ ಜನರನ್ನು ನೋಡಲು ಬಂದಿದ್ದೇ‌. ನಿಮ್ಮ‌ನ್ನು ಭೇಟಿ‌ ಮಾಡಿದ್ದು ಸಂತೋಷವಾಗಿದೆ ಎಂದರು.


Spread the love

About Laxminews 24x7

Check Also

ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು

Spread the love ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ