Breaking News

ಹೋದಲೆಲ್ಲಾ ಬೊಮ್ಮಾಯಿಗೆ ಜೋಡೆತ್ತುಗಳು ಸಾಥ್; ತೀವ್ರ ಚರ್ಚೆ ಹುಟ್ಟುಹಾಕಿದ ಆ ಇಬ್ಬರ ಉಪಸ್ಥಿತಿ..!

Spread the love

ಬೆಂಗಳೂರು: ಬಸವರಾಜ್​​​ ಬೊಮ್ಮಾಯಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಇಲ್ಲಿಯವರೆಗೂ ಕಂದಾಯ ಸಚಿವ ಆರ್​​.ಅಶೋಕ್​​ ಮತ್ತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್​​​​​​​​ ಅವರಲ್ಲಿ ಭಾರೀ ಬದಲಾವಣೆಯಾಗಿದೆ. ಸಿಎಂ ಬಸವರಾಜ್​​ ಬೊಮ್ಮಾಯಿ ಎಲ್ಲಿಗೆ ಹೋದರೆ ಅಲ್ಲಿಗೆ ಈ ಜೋಡೆತ್ತು ಹೋಗುತ್ತಿದೆ ಎಂದು ರಾಜಕೀಯ ವಲಯದಲ್ಲಿ ಜೋರು ಚರ್ಚೆ ಶುರುವಾಗಿದೆ.

ಸಿಎಂ ಬಸವರಾಜ್​​ ಬೊಮ್ಮಾಯಿ ಹಿಂದೆ ಮುಂದೆಯೇ ಈ ಜೋಡೆತ್ತು ಓಡಾಡುತ್ತಿದೆ. ಆರ್​​. ಅಶೋಕ್​​ ಮತ್ತು ಸುಧಾಕರ್​​ ಸಿಎಂ ಎಲ್ಲಿಗೆ ಹೋದರೂ ಬೆಂಬಿಡದಂತೆ ಕಾಡುತ್ತಿದ್ದಾರೆ. ಒಂದು ದಿನ ಸುಧಾಕರ್​​, ಇನ್ನೊಂದು ದಿನ ಆರ್​​. ಅಶೋಕ್​​​ ಶಿಫ್ಟ್​ ವೈಸ್​​​ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರಿನಲ್ಲೇ ಯಾವು ಕಾರ್ಯಕ್ರಮ ನಡೆದರೂ ಸಿಎಂ ಜತೆಗೆ ಈ ಇಬ್ಬರ ಹಾಜರಿ ಕಡ್ಡಾಯ. ಈಗ ದಸರಾ ಹಬ್ಬದ ಸಂದರ್ಭದಲ್ಲಿ ಆರ್​​. ಅಶೋಕ್​​ ಬೊಮ್ಮಾಯಿ ಅವರೊಂದಿಗೆ ಕಾಣಿಸಿಕೊಂಡಿದ್ದ್ದಾರೆ. ಎಲ್ಲಾ ದೆಹಲಿ ಪ್ರವಾಸದ ವೇಳೆಯೂ ಸಿಎಂ ಜತೆ ಸುಧಾಕರ್​​​​ ಹಾಜರಿ ಇರುತ್ತಾರೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ