ಬೆಂಗಳೂರು: ದಿಲ್ಲಿ ಮಾದರಿಯಲ್ಲಿ ಬೆಂಗಳೂರಿನಲ್ಲೂ ಕಾನ್‌ಸ್ಟಿಟ್ಯೂಷನ್ ಕ್ಲಬ್ ಅನ್ನು ಬಾಲಬ್ರೂಯಿ ಅತಿಥಿ ಗೃಹ ಆವರಣದಲ್ಲೇ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬಾಲಬ್ರೂಯಿ ಕಟ್ಟಡದ ಪಾರಂಪರಿಕ ವೈಶಿಷ್ಟéಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಲಾಗುವುದು ಎಂದರು.
ಶಾಸಕರಿಗಾಗಿಯೇ ಒಂದು ಕ್ಲಬ್ ಆರಂಭಿ ಸುವ ಬಗ್ಗೆ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಲೇ ಇತ್ತು. ಕ್ಲಬ್ ಅಗತ್ಯವೂ ಆಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ವಿಧಾನಸಭೆ ಅಧಿವೇಶನ ಅತ್ಯು ತ್ತಮವಾಗಿ ನಡೆದಿದ್ದು, ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು. ಅಧಿವೇಶನದಲ್ಲಿ 19 ಮಸೂದೆ ಅಂಗೀಕಾರವಾಗಿದೆ. ಸಾರ್ವಜನಿಕ ಮಹತ್ವದ ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಸಚಿವರ ಉಪಸ್ಥಿತಿ, ವಿಪಕ್ಷಗಳ ಪಾಲುದಾರಿಕೆ ಉತ್ತಮವಾಗಿತ್ತು ಎಂದರು.
ಕಾಂಗ್ರೆಸ್ ಧರಣಿ ನಡೆಸದಿರಲು ನಿರ್ಣಯ ಕೈಗೊಂಡಿರುವುದಾಗಿ ಸದನದಲ್ಲೇ ಪ್ರಕಟಿಸಿದ್ದು ಒಳ್ಳೆಯ ಬೆಳವಣಿಗೆ. ಅಧಿವೇಶನದಲ್ಲಿ ಕಲಾಪ ಒಮ್ಮೆಯೂ ಗದ್ದಲ, ಗಲಾಟೆ ಕಾರಣ ಮುಂದೂಡುವ ಸಂದರ್ಭ ಬರಲಿಲ್ಲ ಎಂದು ತಿಳಿಸಿದರು.
ಬಿರ್ಲಾ ಭಾಷಣ ಮೈಲುಗಲ್ಲು
ವಿಧಾನಮಂಡಲದ ಸದಸ್ಯರ ಉದ್ದೇಶಿಸಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಭಾಷಣ ಮಾಡಿದ್ದು ಹೊಸ ಮೈಲುಗಲ್ಲು. ಕಾಂಗ್ರೆಸ್ ಪಾಲ್ಗೊಂಡಿದ್ದರೆ ಇನ್ನೂ ಅರ್ಥಪೂರ್ಣವಾಗಿರು ತ್ತಿತ್ತು. ಅವರು ಆ ವಿಚಾರದಲ್ಲಿ ಪ್ರಬುದ್ಧತೆ ತೋರ ಬೇಕಿತ್ತು. ನಾನು ಮತ್ತು ಪರಿಷತ್ ಸಭಾಪತಿ ಸೇರಿ ಕೈಗೊಂಡ ನಿರ್ಧಾರದಂತೆ ಕಾರ್ಯಕ್ರಮ ಮಾಡ ಲಾಗಿತ್ತು. ವಿಧಾನಸಭೆ ವ್ಯಾಪ್ತಿಗೆ ಸಂಬಂಧಿಸಿ ತೀರ್ಮಾನ ಕೈಗೊಳ್ಳುವ ಅಧಿಕಾರ ನಮಗಿದೆ ಎಂದು ಅವರು ಹೇಳಿದರು.