Breaking News

ಶಾರುಖ್​ಗೆ ಸಂಕಷ್ಟ ಎದುರಾಗಿರುವುದರಿಂದ ಗೆಳೆಯನಿಗೆ ಸಹಾಯ ಮಾಡಲು ಸಲ್ಮಾನ್​ ಖಾನ್​ ಆಗಮಿಸಿದ್ದಾರೆ.

Spread the love

ಶಾರುಖ್ ಖಾನ್​ ಪುತ್ರ ಆರ್ಯನ್​ ಖಾನ್​ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಬೈನ ಕಡಲ ತೀರದಲ್ಲಿ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ಮಾಡಿ ಅವರು ಸಿಕ್ಕಿ ಬಿದ್ದಿದ್ದಾರೆ. ಎನ್​ಸಿಬಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಆರ್ಯನ್ ಅವ​ರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇದರಿಂದ ಶಾರುಖ್​ ಖಾನ್​ಗೆ ಟೆನ್ಷನ್​ ಹೆಚ್ಚಿದೆ. ತಮ್ಮ ಸಿನಿಮಾಗಳ ಶೂಟಿಂಗ್ ಕ್ಯಾನ್ಸಲ್​ ಮಾಡಿಕೊಂಡಿರುವ ಕಿಂಗ್ ಖಾನ್​ ಅವರು ಮಗನ ರಕ್ಷಣೆಗಾಗಿ ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅವರ ಸ್ನೇಹಿತ ಸಲ್ಮಾನ್​ ಖಾನ್​ ಕೂಡ ಈ ಸಮಯದಲ್ಲಿ ಬೆಂಬಲ ನೀಡುತ್ತಿದ್ದಾರೆ.

ಭಾನುವಾರ (ಅ.ಡ3) ಸಂಜೆಯೇ ಆರ್ಯನ್​ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಒಂದು ದಿನದ ಮಟ್ಟಿಗೆ ಅವರನ್ನು ಎನ್​ಸಿಬಿ ಕಸ್ಟಡಿಗೆ ನೀಡಿ ಮುಂಬೈ ಕೋರ್ಟ್​ ಆದೇಶ ಹೊರಡಿಸಿದೆ. ಇದು ಶಾರುಖ್​ ತಲೆನೋವಿಗೆ ಕಾರಣ ಆಗಿದೆ. ಭಾನುವಾರ ರಾತ್ರಿ ಅವರು ಮನೆಗೆ ಬಂದು ಮುಂದಿನ ಕ್ರಮಗಳ ಬಗ್ಗೆ ಆಲೋಚಿಸುತ್ತಿದ್ದಾರೆ. ಇದೇ ವೇಳೆ ಸಲ್ಮಾನ್​ ಖಾನ್​ ಕೂಡ ಶಾರುಖ್​ ಖಾನ್​ರ ನಿವಾಸ ‘ಮನ್ನತ್​’ಗೆ ಭೇಟಿ ನೀಡಿದ್ದಾರೆ. ಐಷಾರಾಮಿ ಕಾರಿನಲ್ಲಿ ಅವರು ಆಗಮಿಸಿದ ವಿಡಿಯೋ ವೈರಲ್​ ಆಗುತ್ತಿದೆ.

ಸಲ್ಮಾನ್​ ಖಾನ್​ ಮತ್ತು ಶಾರುಖ್​ ಖಾನ್​ ನಡುವೆ ಉತ್ತಮ ಬಾಂಧವ್ಯ ಇದೆ. ಪರಸ್ಪರರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳನ್ನೂ ನಿಭಾಯಿಸುವ ಮೂಲಕ ಒಬ್ಬರಿಗೊಬ್ಬರು ವೃತ್ತಿಜೀವನದಲ್ಲಿ ನೆರವಾಗುತ್ತಿದ್ದಾರೆ. ಈಗ ಶಾರುಖ್​ಗೆ ವೈಯಕ್ತಿಕ ಜೀವನದಲ್ಲಿ ಸಂಕಷ್ಟ ಎದುರಾಗಿರುವುದರಿಂದ ಗೆಳೆಯನಿಗೆ ಸಹಾಯ ಮಾಡಲು ಸಲ್ಮಾನ್​ ಖಾನ್​ ಆಗಮಿಸಿದ್ದಾರೆ. ಡ್ರಗ್ಸ್​ ಪಾರ್ಟಿ ಕೇಸ್​ನಿಂದ ಆರ್ಯನ್​ನನ್ನು ಹೇಗೆ ಹೊರತರಬೇಕು ಎಂಬ ಕಾನೂನು ಹಾದಿಗಳ ಬಗ್ಗೆ ಇಬ್ಬರೂ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.

ಪಾರ್ಟಿ ನಡೆದ ಸ್ಥಳದಲ್ಲಿ ಮಾದಕ ವಸ್ತುಗಳು ಕೂಡ ಪತ್ತೆ ಆಗಿವೆ. ಆದರೆ ಎಷ್ಟು ಪ್ರಮಾಣದ ಡ್ರಗ್ಸ್​ ಸಿಕ್ಕಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ. ವಶಕ್ಕೆ ಪಡೆದವರನ್ನು ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ. ಬಾಲಿವುಡ್​ನಲ್ಲಿ ಹರಡಿರುವ ಡ್ರಗ್ಸ್​ ಜಾಲವನ್ನು ಭೇದಿಸಲು ಈ ದಾಳಿ ಹೆಚ್ಚು ಸಹಕಾರಿ ಆಗಲಿದೆ.


Spread the love

About Laxminews 24x7

Check Also

ಸುವರ್ಣಸೌಧದಲ್ಲಿ ಸಭಾಧ್ಯಕ್ಷರಿಗೆ 43 ಲಕ್ಷ ರೂ. ಪೀಠ… 11 ಮಹಾನ್ ಪುರುಷರ ಭಾವಚಿತ್ರ ಅಳವಡಿಸಲು 67 ಲಕ್ಷ ವ್ಯಯ!!!

Spread the love ಸುವರ್ಣಸೌಧದಲ್ಲಿ ಸಭಾಧ್ಯಕ್ಷರಿಗೆ 43 ಲಕ್ಷ ರೂ. ಪೀಠ… 11 ಮಹಾನ್ ಪುರುಷರ ಭಾವಚಿತ್ರ ಅಳವಡಿಸಲು 67 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ