ತೆಲುಗಿನ ಚಿತ್ರರಂಗದ ಸ್ಟಾರ್ ಜೋಡಿ ಸಮಂತಾ ಮತ್ತು ನಾಗಚೈತನ್ಯ ತಮ್ಮ 4 ವರ್ಷಗಳ ದಾಂಪತ್ಯ ಜೀವನಕ್ಕೆ ಡಿವೋರ್ಸ್ ಮೂಲಕ ವಿದಾಯ ಹೇಳಿದ್ದಾರೆ. ಈ ವಿಚಾರವಾಗಿ ಇದೀಗ ಟಾಲಿವುಡ್ನಿಂದ ಬಾಲಿವುಡ್ವರೆಗೂ ಚರ್ಚೆಯಾಗುತ್ತಿದೆ. ಸಮಂತಾ-ನಾಗ ಚೈತನ್ಯ ಅಭಿಮಾನಿಗಳಲ್ಲಿ ಇದರಿಂದ ಬೇಸರವೂ ಆಗಿದೆ.
ಈ ಮಧ್ಯೆ ಟಾಲಿವುಡ್ನ ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಟ್ವೀಟ್ ಒಂದನ್ನು ಮಾಡಿದ್ದಾರೆ. ತಮ್ಮ ಟ್ವೀಟ್ನಲ್ಲಿ ಮದುವೆಗಿಂತಲೂ ವಿಚ್ಛೇದನ ಕಾರ್ಯಕ್ರಮಗಳನ್ನು ಹೆಚ್ಚಾಗಿ ಸಂಭ್ರಮಿಸಬೇಕಿದೆ ಎಂದಿದ್ದಾರೆ. ಸಂಭ್ರಮದಿಂದ ಮಾಡಿದ ಬಹುತೇಕ ಮದುವೆಗಳು ಕೆಲವೇ ದಿನಗಳಲ್ಲಿ ಕೊನೆಯಾಗುತ್ತವೆ. ಮತ್ತು ನಿಜವಾದ ಸಂಗೀತ ಮೊಳಗಬೇಕಿರೋದು ಡಿವೋರ್ಸ್ ಈವೆಂಟ್ಗಳಲ್ಲಿ. ಇಂಥ ಕಾರ್ಯಕ್ರಮಗಳಲ್ಲಿ ಎಲ್ಲ ವಿಚ್ಛೇದಿತ ಗಂಡಸರು ಮತ್ತು ಹೆಂಗಸರು ಕುಣಿಯುತ್ತಿರುತ್ತಾರೆ ಎಂದಿದ್ದಾರೆ.
ಅಲ್ಲದೇ ಮದುವೆಗಳು ನರಕದಲ್ಲಿ ನಿಗದಿಯಾಗುತ್ತವೆ.. ಡಿವೋರ್ಸ್ಗಳು ಸ್ವರ್ಗದಲ್ಲಿ ನಿಗದಿಯಾಗುತ್ತವೆ ಅಂತಲೂ ಹೇಳಿದ್ದಾರೆ.
Laxmi News 24×7