Breaking News

ಈ ಸರ್ಕಾರದಲ್ಲಿ ರೈತರ ಮಾತುಗಳನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ- ಸಾಹಿತಿ ಕುಂವೀ ಬೇಸರ

Spread the love

ಧಾರವಾಡ: ಜಿಲ್ಲೆಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಾದಂಬರಿಕಾರ ಕುಂ. ವೀರಭದ್ರಪ್ಪ ಭಾರತ್ ಬಂದ್ ವಿಚಾರವಾಗಿ ಕಳಕಳಿ ವ್ಯಕ್ತಪಡಿಸಿದ್ದಾರೆ.

ನಾಳೆ ರೈತರು ಬಂದ್ ಮಾಡುತ್ತಿದ್ದಾರೆ, ರೈತರ ಮಾತುಗಳನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ. ರೈತರು, ಕಾರ್ಮಿಕರು, ಶಿಕ್ಷಕರ ಮಾತುಗಳನ್ನು ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ. ಈ ಸರ್ಕಾರದಲ್ಲಿ ಶೇ. 72ರಷ್ಟು ಕ್ರಿಮಿನಲ್‌ಗಳಿದ್ದಾರೆ, ಅವರು ಚುನಾಯಿತ ಪ್ರತಿನಿಧಿಗಳಿದ್ದಾರೆ. ಅವರು ಈ ದೇಶವನ್ನು ಆಳುತ್ತಿದ್ದಾರೆ, ಕೋಟ್ಯಾಧೀಶರು ಆಳುತ್ತಿದ್ದಾರೆ. ಅವರಿಂದ ಬಡವರ ಆಕ್ರಂದನ, ನೋವು, ನಲಿವಿಗೆ ಪರಿಹಾರ ಸೂಚಿಸಲು ಸಾಧ್ಯವಿಲ್ಲ ಎಂದು ಕುಂ. ವೀರಭದ್ರಪ್ಪ ಹೇಳಿದ್ದಾರೆ.

ಮುಂದುವರೆದು.. ಇದಕ್ಕಾಗಿ ಲೇಖಕರು ಏನಾದರೂ ಮಾಡಬೇಕು. ಲೇಖಕರು ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳಬಾರದು. ಈಗ ಲೇಖಕರು ಬೀದಿಯಲ್ಲಿ ಇಳಿಯಬೇಕು. 1973-78ರ ನಡುವೆ ನಡೆದ ಚಳವಳಿಗೆ ಮರುಹುಟ್ಟು ನೀಡುವ ಕೆಲಸ ಮಾಡಬೇಕಿದೆ. ಅಂತಹ ಚಳವಳಿಗಳ ರೂವಾರಿ ಚಂಪಾ. ಆದರೆ ಅವರು ವೃದ್ಧಾಶ್ರಯದಲ್ಲಿ ಮಲಗಿದ್ದಾರೆ. ಇದರಿಂದ ಇಡೀ ಚಳವಳಿಗಳ ರೂಪವೇ ಮಲಗಿದಂತೆ ಆಗಿದೆ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ನಾಗನೂರು ಪಟ್ಟಣದಲ್ಲಿ ವಿಭಾಗ ಹಾಗೂ ರಾಜ್ಯಮಟ್ಟದ ಖೋ ಖೋ ಟೂರ್ನಿಯಲ್ಲಿ ಸಂಸದೆ ಪ್ರಿಯಾಂಕ ಜಾರಕಿಹೊಳಿ ಭಾಗಿ

Spread the love ನಾಗನೂರು ಪಟ್ಟಣದಲ್ಲಿ ವಿಭಾಗ ಹಾಗೂ ರಾಜ್ಯಮಟ್ಟದ ಖೋ ಖೋ ಟೂರ್ನಿಯಲ್ಲಿ ಸಂಸದೆ ಪ್ರಿಯಾಂಕ ಜಾರಕಿಹೊಳಿ ಭಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ