Breaking News
Home / ರಾಜಕೀಯ / ಕೃಷಿ ಕಾಯ್ದೆ ವಿರೋಧಿಸಿ ಇಂದು ಭಾರತ್ ಬಂದ್; ಆ ಮೂರು ಕೃಷಿ ಕಾಯ್ದೆಗಳು ಯಾವುದು..?

ಕೃಷಿ ಕಾಯ್ದೆ ವಿರೋಧಿಸಿ ಇಂದು ಭಾರತ್ ಬಂದ್; ಆ ಮೂರು ಕೃಷಿ ಕಾಯ್ದೆಗಳು ಯಾವುದು..?

Spread the love

ಬೆಂಗಳೂರು: ಭಾರತ​ ಬಂದ್​ಗೆ ಮತ್ತೆ ಕರೆ ನೀಡಲಾಗಿದೆ. ಕೇಂದ್ರದ ಮೂರು ಕೃಷಿ ಕಾಯ್ದೆ, ಖಾಸಗೀಕರಣ ಹಾಗೂ ಬೆಲೆ ಏರಿಕೆ ವಿರೋಧಿಸಿ ವಿವಿಧ ರೈತ ಸಂಘಟನೆಗಳು ಇಂದು ಬೀದಿಗೆ ಇಳಿಯುತ್ತಿದ್ದಾರೆ. ಇದಕ್ಕಾಗಿ ಪೂರ್ವ ಸಿದ್ಧತೆ ಮಾಡ್ಕೊಂಡಿರೋ ರೈತರು, ದೇಶಾದ್ಯಂತ ಜಾಥಾ ನಡೆಸುತ್ತಿದ್ದಾರೆ. ಈ ಬಾರಿಯೂ ಪ್ರತಿಭಟನೆ, ಜಾಥಾ ಮೂಲಕವೇ ಕೇಂದ್ರ, ರಾಜ್ಯದ ವಿರುದ್ಧ ಅಸ್ತ್ರ ಪ್ರಯೋಗಿಸುತ್ತಿದ್ದಾರೆ.

ಸುಮಾರು ಒಂದೂವರೆ ವರ್ಷಗಳಿಂದ ಜನರ ಜೀವದ ಜೊತೆ ಜೀವನದ ಮೇಲೆ ಪರಿಣಾಮ ಬೀರಿರೋ ಕೊರೊನಾ ಈಗಷ್ಟೇ ಹತೋಟಿಗೆ ಬಂದಿದೆ. ಜನರ ಬದುಕು ಸಹಜ ಸ್ಥಿತಿಗೆ ಮರಳಿದೆ. ವ್ಯಾಪಾರ ವಹಿವಾಟಿನಲ್ಲಿ ಪ್ರಗತಿ ಕಾಣ್ತಿದೆ. ಜನ ನೆಮ್ಮದಿಯ ಜೀವನ ಸಾಗಿಸ್ತಿರೋವಾಗಲೇ ಮತ್ತೆ ಬಂದ್​ ಎಂಬ ಶಬ್ದ ಮಾರ್ಧನಿಸಿದೆ. ಆದ್ರೆ ಈ ಬಾರಿಯ ಬಂದ್​ ಕೊರೊನಾ ಕಾರಣದಿಂದಲ್ಲ. ಬದಲಾಗಿ ಕೇಂದ್ರ ತಂದಿರೋ ಮೂರು ಕೃಷಿ ಕಾಯ್ದೆಗಳು, ಖಾಸಗೀಕರಣ ಹಾಗೂ ಬೆಲೆ ಏರಿಕೆ ಏಫೆಕ್ಟ್‌​.

ಮೂರು ಕೃಷಿ ಕಾಯ್ದೆಗಳು ಯಾವುವು?

  • ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ
  • ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ
  • ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳು

Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ