ಸಿಂಧನೂರು: ನರೇಗಾ ಯೋಜನೆಯಡಿ ಲಭ್ಯವಾದ 5 ಲಕ್ಷ ರೂ.ವೆಚ್ಚದಲ್ಲಿ ಕೈಗೆತ್ತಿಕೊಂಡ ಸಿಸಿ ರಸ್ತೆ ಕಾಮಗಾರಿ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆಗೆ ಸಂಬಂಧಿಸಿ ಪೊಲೀಸರು ಶುಕ್ರವಾರ 10 ಜನರನ್ನು ಬಂಧಿಸಿದ್ದಾರೆ.
ಕುನ್ನಟಗಿ ಗ್ರಾಮದ ಕಾಂತರೆಡ್ಡಿ ಎನ್ನುವವರು ನರೇಗಾ ಕೆಲಸ ಕೈಗೆತ್ತಿಕೊಂಡಿದ್ದರು. ಇದೇ ಕೆಲಸದಲ್ಲಿ ಪಾಲುದಾರಿಕೆ ಕೊಡದ ಹಿನ್ನೆಲೆಯಲ್ಲಿ ಹಲವರು ಬಂದು ತಮ್ಮ ಹಲ್ಲೆ ನಡೆಸಿದ್ದಾರೆಂದು ದೂರಿದ್ದರಿಂದ 10 ಕ್ಕೂ ಹಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಬರ್ತ್ ಡೇ ಪಾರ್ಟಿ ಮುಗಿಸಿಕೊಂಡು ಪಟಾಕಿ ಸಿಡಿಸಿದ ಕಾರಣಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು 14 ಜನರ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು 10 ಜನರನ್ನು ಬಂಧಿಸಿದ್ದಾರೆ. ಘರ್ಷಣೆಯಲ್ಲಿ ಕಾರೊಂದು ಜಖಂಗೊಂಡಿದೆ.
Laxmi News 24×7