Breaking News
Home / ರಾಜಕೀಯ / ನಕಲಿ ಸಹಿ ಮಾಡಿ ಭೂಮಿ ನೋಂದಣಿ ಆರೋಪ; ಗ್ರೇಡ್ 2 ತಹಶೀಲ್ದಾರ್ ಅರೆಸ್ಟ್

ನಕಲಿ ಸಹಿ ಮಾಡಿ ಭೂಮಿ ನೋಂದಣಿ ಆರೋಪ; ಗ್ರೇಡ್ 2 ತಹಶೀಲ್ದಾರ್ ಅರೆಸ್ಟ್

Spread the love

ಚಿಕ್ಕೋಡಿ: ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಜಮೀನು ನೊಂದಾಯಿಸಿದ್ದ ಆರೋಪದ ಮೇಲೆ ಚಿಕ್ಕೋಡಿ ಗ್ರೇಡ್ 2 ತಹಶೀಲ್ದಾರ್ ಅವರನ್ನು ಅರೆಸ್ಟ್‌ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.

ಚಿಕ್ಕೋಡಿ‌ ತಹಶೀಲ್ದಾರರ ಕಚೇರಿಯಲ್ಲಿ ಗ್ರೇಡ್ 2 ತಹಶೀಲ್ದಾರ ಆಗಿ ಕಾರ್ಯನಿರ್ವಹಿಸುತ್ತಿದ್ದ ಅರುಣ್ ಶ್ರೀಖಂಡೆ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಗ್ರೇಡ್ 2 ತಹಶೀಲ್ದಾರರ ಶ್ರೀಖಂಡೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದ ಮಾರುತಿ ಕರಿಗಾರ ಎಂಬುವರಿಗೆ ಸೇರಿದ್ದ ರಿ.ನಂ 436/5ಮತ್ತು 436/6 ರ ಜಮೀನು ಕೊಟ್ಟಿ ದಾಖಲೆ ಸೃಷ್ಠಿಸಿ ಖರೀದಿ ಮಾಡಿ ಪೋರ್ಜರಿ ಸಹಿ ಮಾಡಿ ಭೂಮಿಯನ್ನು ನೊಂದಾಯಿಸಿದ್ದ ಆರೋಪವಿತ್ತು.

ಈ ಬಗ್ಗೆ ಮಾರುತಿ ಕರಿಗಾರ ಎಂಬುವವರು ನೀಡಿದ ದೂರಿನ ಮೇರೆಗೆ ಗ್ರೇಡ್ 2 ತಹಶಿಲ್ದಾರ ಅವರನ್ನು ಅರೆಸ್ಟ್ ಮಾಡಿದ ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ.


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ