Breaking News

ಕಣ್ಣೀರಿಡುತ್ತಾ ಸದನದಿಂದ ಹೊರ ಬಂದ ಅಂಜಲಿ ನಿಂಬಾಳ್ಕರ್

Spread the love

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಇತ್ತೀಚೆಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರ ಪ್ರತಿಧ್ವನಿಸಿತು. ಈ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಭಾವುಕರಾದ ಸನ್ನಿವೇಶಕ್ಕೆ ಸದನದ ಸದಸ್ಯರು ಸಾಕ್ಷಿಯಾದರು. ರೇಪ್ ಪ್ರಕರಣದ ಚರ್ಚೆ ವೇಳೆ ಕಣ್ಣೀರಿಡುತ್ತಾ ಸದನದಿಂದ ಹೊರ ಬಂದ ಅಂಜಲಿ ನಿಂಬಾಳ್ಕರ್

ಗ್ಯಾಂಗ್ ರೇಪ್ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಶಾಸಕಿ ರೂಪ ಶಶಿಧರ್ ಮಾತನಾಡುವಾಗ.. ಕಣ್ಣೀರಿಡುತ್ತಾ ಸದನದಿಂದ ಮೊಗಸಾಲೆಗೆ ಹೋದ ಅಂಜಲಿ ನಿಂಬಾಳ್ಕರ್ ನಂತರ ಕಣ್ಣೀರು ಒರೆಸಿಕೊಂಡು, ಸಮಾಧಾನ ಮಾಡಿಕೊಂಡ ನಂತರ ಪುನಃ ಸದನಕ್ಕೆ ವಾಪಸ್ಸಾದರು.

ಇನ್ನು ಗ್ಯಾಂಗ್ ರೇಪ್ ಪ್ರಕರಣದ ಚರ್ಚೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಶಾಸಕಿ ರೂಪ ಶಶಿಧರ್.. ನಮ್ಮ ಹೆಣ್ಣು ಮಕ್ಕಳು, ಇಲ್ಲಿರುವ ಪತ್ರಕರ್ತೆಯರು, ಎಷ್ಟೋ ಜನ ಕೆಲಸಕ್ಕೆ ಹೋಗುವವರು ಸಂಜೆ ಮನೆಗೆ ಹೋಗಲು ಆಗಲ್ಲ. ರಾತ್ರಿ ಕೆಲಸದ ನಂತರ ಮನೆಗೆ ಹೋಗೋದು ತಡವಾಗುತ್ತೆ. ಅವರಿಗೆ ಭದ್ರತೆ ಕೊಡಬೇಕಾದ್ದು ನಮ್ಮ ವ್ಯವಸ್ಥೆ ಜವಾಬ್ದಾರಿ ಅಲ್ಲವೇ? ಯಾರೂ ಕೂಡ ಈ ಸದನದ ಸದಸ್ಯರು ರೇಪ್ ಎಂಬ ಪದ ಬಳಸಬೇಡಿ, ಮಾಧ್ಯಮದವರು ಜಾಗೃತಿ ಮೂಡಿಸಲು, ಎಚ್ಚರಿಸಲು ಆ ಪದ ಬಳಸ್ತಾರೆ, ಆದರೆ ನೀವು ಬಳಸಬೇಡಿ ಎಂದು ಭಾವುಕರಾಗಿ ಕಣ್ಣಲ್ಲಿ ನೀರು ತುಂಬಿಕೊಂಡು ರೂಪಾ ಶಶಿಧರ್ ಮಾತಾಡಿದರು.

ಕಣ್ಣಲ್ಲಿ ನೀರು ತುಂಬಿಕೊಂಡೇ ಮಾತನಾಡಿದ ಅಂಜಲಿ ನಿಂಬಾಳ್ಕರ್.. ರೇಪ್ ಎಂಬ ಪದ ಬಹಳ ಸಾಮಾನ್ಯವಾಗಿ ಬಳಸ್ತಾರೆ, ಆಡಳಿತ ಪಕ್ಷದ ಶಾಸಕರ ಮಾತುಗಳಿಂದ ನೊಂದಿದ್ದೇನೆ. ಗೃಹ ಸಚಿವರು ಮಾತನಾಡುವಾಗ ಕಾಂಗ್ರೆಸ್ ಪಕ್ಷದ ಸದಸ್ಯರು ನನ್ನ ರೇಪ್ ಮಾಡಿದಾರೆ ಅಂತಾರೆ ಎಂದರು.

ಇಲ್ಲಿ ನಾವು ಮಾತಾಡುವಾಗ ಇಲ್ಲೇ ಬೆಂಗಳೂರಲ್ಲೇ ಒಂದು ರೇಪ್ ನಡೆದಿದೆ ಎಂಬ ಮಾಹಿತಿ ಸಿಎಂ ಕೊಡ್ತಾರೆ. ಏನಾಗ್ತಿದೆ ಸರ್..? ನಮ್ಮ ಪೊಲೀಸರು ಏನ್ಮಾಡ್ತಿದ್ದಾರೆ..? ನಿರ್ಭಯ ಫಂಡ್ ಏನಾಯ್ತು? ಹುಡುಗರಿಗೆ ಇದರ ಬಗ್ಗೆ ತಿಳುವಳಿಕೆ ನೀಡುತ್ತಿದ್ದೀವಾ? ಸೆಕ್ಸ್ ಎಜುಕೇಶನ್ ಕೊಡಬಹುದೇ? ಎಜುಕೇಶನ್ ಮಿನಿಸ್ಟರ್ ಇಲ್ಲಿದ್ದಾರೆ, ಸದನದಲ್ಲಿ ಇದರ ಬಗ್ಗೆ ಒಂದು ತೀರ್ಮಾನ ಆಗಬಹುದು ಅಂತ ಭಾವಿಸಿದ್ದೇನೆ. ಮೇಜರ್ ಕಲ್ಪ್ರಿಟ್ ಈಸ್ ಬಾಯ್, ಗರ್ಲ್ ಈಸ್ ವಿಕ್ಟಿಂ. ಹೀಗಾಗಿ ಹುಡುಗರಿಗೆ ಎಜುಕೇಶನ್ ಕೊಡಬೇಕಾದ ಅಗತ್ಯವಿದೆ, ಶಿಕ್ಷಣ ಸಚಿವರು ತೀರ್ಮಾನ ಮಾಡಲಿ. ಆರನೇ ಇಯತ್ತೇಯಲ್ಲೇ ಈ ಬಗ್ಗೆ ಎಜುಕೇಶನ್ ಕೊಡಬಹುದೇ? ನಾನೊಬ್ಬಳು ಗೈನಾಕಲಾಜಿಸ್ಟ್ ಆಗಿ ನಾನು ಪರೀಕ್ಷೆ ಮಾಡಿದ್ದೇನೆ, ಅವರ ಕಷ್ಟ ಏನು ಅಂತ ಗೊತ್ತಿದೆ. ಆಡಳಿತ ಪಕ್ಷದ ಶಾಸಕರ ಕಡೆ ತಿರುಗಿ ಇದು ನಗುವ ವಿಚಾರ ಅಲ್ಲ, ಗಂಭೀರ ವಿಚಾರ ಎಂದ ಅಂಜಲಿ.. ಆಪ್ ಕಿತನೇಬೀ ಮರ್ದ್ ಹೋ, ಆಪ್ ಮರ್ದಾನಿ ಸಿರ್ಫ್ ಟೆಸ್ಟೋಸಿರಾನ್ ಮೆ ನಹೀ ಹೈ ಎಂದು ಹೇಳಿದ್ರು.

 

Spread the love

About Laxminews 24x7

Check Also

ವೀರಶೈವ-ಲಿಂಗಾಯತ ಒಬಿಸಿ ಸೇರ್ಪಡೆಗೆ ಒತ್ತಾಯ

Spread the love ಬೆಂಗಳೂರು: ಜಾತಿ ಗಣತಿ (ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ) ವರದಿಯನ್ನು ಮುಂದಿನ ಸಚಿವ ಸಂಪುಟದಲ್ಲಿ ಕೈಗೆತ್ತಿಕೊಳ್ಳಲು ಸರಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ