Breaking News
Home / ರಾಜಕೀಯ / ಚಿತ್ರರಂಗದಲ್ಲಿ ಕಷ್ಟಪಡುತ್ತಿದ್ದ ಯುವತಿಯರೇ ರಾಜ್ ಕುಂದ್ರಾ ಮತ್ತು ಇತರ ಆರೋಪಿಗಳ ದಂಧೆಗೆ ಟಾರ್ಗೆಟ್

ಚಿತ್ರರಂಗದಲ್ಲಿ ಕಷ್ಟಪಡುತ್ತಿದ್ದ ಯುವತಿಯರೇ ರಾಜ್ ಕುಂದ್ರಾ ಮತ್ತು ಇತರ ಆರೋಪಿಗಳ ದಂಧೆಗೆ ಟಾರ್ಗೆಟ್

Spread the love

ಉದ್ಯಮಿ ರಾಜ್ ಕುಂದ್ರಾ ವಿರುದ್ಧ ದಾಖಲಾಗಿರುವ ಅಶ್ಲೀಲ ಸಿನಿಮಾ ತಯಾರಿಕೆ ಮತ್ತು ಹಂಚಿಕೆ ಪ್ರಕರಣ ಕುಂದ್ರಾ ಪಾಲಿಗೆ ಮತ್ತಷ್ಟು ಉರುಳಾಗಿದೆ. ದಂಧೆಯಿಂದ ಕೋಟಿಗಟ್ಟಲೆ ಹಣವನ್ನು ರಾಜ್ ಸಂಪಾದಿಸಿದ್ದಾರೆ ಎಂದು ಪೊಲೀಸರು ಚಾರ್ಜ್​ಶೀಟಿನಲ್ಲಿ ಆರೋಪಿಸಿದ್ಧಾರೆ.

ಬಾಲಿವುಡ್‌ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್‌ ಕುಂದ್ರಾ ಭಾಗಿಯಾಗಿರುವ ‘ಪೋರ್ನ್ ಫಿಲ್ಮ್ ಕೇಸ್’ಗೆ ಸಂಬಂಧಪಟ್ಟಂತೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 1,500 ಪುಟಗಳ ಈ ಚಾರ್ಜ್ ಶೀಟ್​ನಲ್ಲಿ ರಾಜ್ ಕುಂದ್ರಾರನ್ನು ಪ್ರಕರಣಕ್ಕೆ ಮುಖ್ಯವಾಗಿ ಸಹಾಯ ಮಾಡಿದ(Main Facilitator) ಆರೋಪಿ ಎಂದು ಉಲ್ಲೇಖಿಸಲಾಗಿದೆ. ಅಲ್ಲದೇ ಅವರು ಈ ದಂಧೆಯಿಂದ ಕೋಟಿಗಟ್ಟಲೆ ಹಣ ಸಂಪಾದನೆಯನ್ನೂ ಮಾಡಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ. ಅಶ್ಲೀಲ ಚಿತ್ರಗಳ ಚಿತ್ರೀಕರಣಕ್ಕಾಗಿ ಚಿತ್ರರಂಗದಲ್ಲಿ ಕಷ್ಟಪಡುತ್ತಿದ್ದ ಅಮಾಯಕ ಹೆಣ್ಣು ಮಕ್ಕಳನ್ನು ರಾಜ್ ಕುಂದ್ರಾ ಮತ್ತು ಪ್ರಕರಣದ ಆರೋಪಿಗಳು ಬಳಸುತ್ತಿದ್ದರು ಎಂಬುದನ್ನೂ ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

ಬುಧವಾರ ಮುಂಬೈನ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು, ಅದರಲ್ಲಿ 46 ವರ್ಷದ ರಾಜ್ ಕುಂದ್ರಾ ವಿರುದ್ಧ ತನಿಖೆಯ ನಂತರ ಹಲವು ಆರೋಪಗಳನ್ನು ಮಾಡಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ರಿಯಾನ್ ಥಾರ್ಪೆ ವಿರುದ್ಧವೂ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಜುಲೈನಲ್ಲಿ ರಾಜ್‌ ಕುಂದ್ರಾ ಪೋರ್ನ್ ಸಿನಿಮಾ ತಯಾರಿಕೆ ಹಾಗೂ ಹಂಚಿಕೆಯ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದರು‌. ಈ ಪ್ರಕರಣದಲ್ಲಿ ಸಿಂಗಾಪುರ ನಿವಾಸಿಯಾಗಿರುವ ಯಶ್ ಠಾಕೂರ್ ಹಾಗೂ ಲಂಡನ್ ಮೂಲದ ಪರದೀಪ್ ಬಕ್ಷಿ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಬಂಧನಕ್ಕೆ ಸಿಕ್ಕಿಲ್ಲ ಎಂದು ಚಾರ್ಜ್ ಶೀಟ್​ನಲ್ಲಿ ತಿಳಿಸಲಾಗಿದೆ. ಈ ಹಿಂದೆ ಏಪ್ರಿಲ್ ನಲ್ಲಿ ಅಪರಾಧ ವಿಭಾಗದ ಪೊಲೀಸರು ಒಂಬತ್ತು ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಪ್ರಸ್ತುತ ಸಲ್ಲಿಸಲಾಗಿರುವ ಆರೋಪ ಪಟ್ಟಿಯಲ್ಲಿ ರಾಜ್‌ ಕುಂದ್ರಾ ದಂಧೆಗೆ ಸಹಾಯ ಮಾಡಿದ ಪ್ರಮುಖ ವ್ಯಕ್ತಿ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ಹಲವು ಸಾಕ್ಷಿಗಳ‌ ಹೇಳಿಕೆ, ತಾಂತ್ರಿಕ ವಿಶ್ಲೇಷಣೆ ಮತ್ತು‌ ತನಿಖೆಯ ನಂತರ ರಾಜ್ ಕುಂದ್ರಾ ವಿರುದ್ಧ ಬಲವಾದ ಸಾಕ್ಷಾಧಾರಗಳು ಲಭ್ಯವಾದವು ಎಂದು ವರದಿಯಲ್ಲಿ ತಿಳಿಸಲಾಗಿದೆ. ಕುಂದ್ರಾ ಹಾಗೂ ಥಾರ್ಪೆ ಜೊತೆಯಾಗಿ ಚಿತ್ರರಂಗದಲ್ಲಿ ಕೆಲಸ ಮಾಡುವ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಯುವತಿಯರನ್ನು ಬಳಸಿಕೊಂಡು, ಅವರಿಂದ ಅಶ್ಲೀಲ ಚಿತ್ರಗಳ ಚಿತ್ರೀಕರಣ ನಡೆಸುತ್ತಿದ್ದರು. ನಂತರ ಅದನ್ನು ಹಲವಾರು ವೇದಿಕೆಗಳ ಮುಖಾಂತರ ಹಂಚಿಕೆ ಮಾಡಿ, ಕಾನೂನಿಗೆ ವಿರುದ್ಧವಾಗಿ ಕೋಟಿಗಟ್ಟಲೆ ಹಣ ಸಂಪಾದಿಸಿದ್ದರು ಎಂದು ತಿಳಿಸಲಾಗಿದೆ. ಇದಲ್ಲದೇ ಚಿತ್ರೀಕರಣಕ್ಕೆ ಬಳಸಿಕೊಂಡ ಯುವತಿಯರಿಗೆ ಹಣವನ್ನು‌ ಕೊಡದೇ ವಂಚಿಸಿದ್ದರು ಎಂದು ಉಲ್ಲೇಖಿಸಲಾಗಿದೆ.

ರಾಜ್‌ ಕುಂದ್ರಾ ವಿರುದ್ಧ ಯಾವೆಲ್ಲಾ ಪ್ರಕರಣ ದಾಖಲಿಸಲಾಗಿದೆ?
ರಾಜ್‌ ಕುಂದ್ರಾ ಮತ್ತು ಥಾರ್ಪೆ‌ಜೊತೆಯಾಗಿ‌ಸಾಕ್ಷಿ ನಾಶಕ್ಕೂ‌ ಪ್ರಯತ್ನಿಸಿದ್ದರು. ವಾಟ್ಸಾಪ್ ಕರೆಗಳು, ಇ‌ಮೈಲ್ ಗಳನ್ನು ಅವರ ಮೊಬೈಲ್ ಹಾಗೂ ಲ್ಯಾಪ್ಟಾಪ್ ಗಳಿಂದ ಅಳಿಸಿಹಾಕಲಾಗಿತ್ತು‌ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ. ರಾಜ್‌ ಕುಂದ್ರಾ ಹಾಗೂ ಅವರ ಸಹವರ್ತಿಗಳ ವಿರುದ್ಧ ಲೈಂಗಿಕ ಕಿರುಕುಳ, ವಂಚನೆ, ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸುವುದು, ಮಾಹಿತಿ‌ ಮತ್ತು ತಂತ್ರಜ್ಞಾನ ಕಾಯ್ದೆ- ಮೊದಲಾದ ಐಪಿಸಿ ಸೆಕ್ಷನ್ ಅನ್ವಯ ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಸ್ತುತ ರಾಜ್‌ ಕುಂದ್ರಾ ಬಂಧನದಲ್ಲಿದ್ದು, ಜಾಮೀನಿನ ಅರ್ಜಿಯು ಮುಂಬೈನ ಸೆಷನ್ಸ್ ನ್ಯಾಯಾಲಯದ ಮುಂದಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ