Breaking News

ಬೆಳಗಾವಿಯ 46 ಅನಧಿಕೃತ ಧಾರ್ಮಿಕ ಕಟ್ಟಡಗಳ ಗುರುತು, ಶೀಘ್ರವೇ ತೆರವು ಎಂದ ಬೆಳಗಾವಿ ಡಿಸಿ….!

Spread the love

 

 

ಬೆಳಗಾವಿ:

ಅನಧಿಕೃತ ಧಾರ್ಮಿಕ ಕೇಂದ್ರಗಳ ಕಟ್ಟಡ ತೆರವಿಗೆ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ 46 ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ಗುರುತಿಸಲಾಗಿದೆ. ಶೀಘ್ರವೇ ಈ ಎಲ್ಲವನ್ನೂ ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದ್ದಾರೆ.

ಈ ಎಲ್ಲ 46 ಧಾರ್ಮಿಕ ಕೇಂದ್ರ ಕಟ್ಟಡಗಳು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿವೆ. ಈಗಾಗಲೇ ಒಟ್ಟು 17 ಅನಧಿಕೃತ ಧಾರ್ಮಿಕ ಕೇಂದ್ರದ ಕಟ್ಟಡಗಳ ತೆರವು ಮಾಡಲಾಗಿದೆ. ಇನ್ನುಳಿದ 29 ಅನಧಿಕೃತ ಧಾರ್ಮಿಕ ಕೇಂದ್ರ ಕಟ್ಟಡ ತೆರವು ಮಾಡಬೇಕಿದೆ. ನಿಪ್ಪಾಣಿಯಲ್ಲಿ ನಾಲ್ಕು ಧಾರ್ಮಿಕ ಕೇಂದ್ರ ಕಟ್ಟಡ ಸ್ಥಳಾಂತರಗೊಳಿಸಬೇಕಿದೆ. ಇದರಲ್ಲಿ ಯಾವುದೇ ಐತಿಹಾಸಿಕ ಕಟ್ಟಡಗಳಿಲ್ಲ. ರೆಗ್ಯೂಲರೈಸ್ಡ್ ಮಾಡಲೂ ಸಹ ನಮಗೆ ಅವಕಾಶ ಇದೆ. ಟ್ರಾಫಿಕ್ ತೊಂದರೆ ಸೇರಿ ಸಾರ್ವಜನಿಕರಿಗೆ ತೊಂದರೆ ಆಗದೇ ಇರುವ ಕಟ್ಟಡಗಳ ರೆಗ್ಯುಲರೈಸ್ಡ್ ಮಾಡಲು ಅವಕಾಶವಿದೆ. 29 ಅನಧಿಕೃತ ಧಾರ್ಮಿಕ ಕೇಂದ್ರಗಳ ಕಟ್ಟಡ ತೆರವು ಕಾರ್ಯ ಪೆಂಡಿಂಗ್ ಇದೆ. ಗಣೇಶೋತ್ಸವ ಮುಗಿದ ಮೇಲೆ ತೆರವು ಮಾಡಲು ಕ್ರಮ ಕೈಗೊಳ್ಳುತ್ತೇವೆ. ಸ್ಥಳೀಯರನ್ನು ವಿಶ್ವಾಸಕ್ಕೆ ತಗೆದುಕೊಂಡೇ ತೆರವು ಕಾರ್ಯಾಚರಣೆ ನಡೆಯಲಿದೆ. ಕೂಲಂಕುಷವಾಗಿ ವಾರ್ಡ್‌ವಾರು ಪರಿಶೀಲಿಸಿ ಪಟ್ಟಿ ಮಾಡಲಾಗಿದೆ. ಎಲ್ಲ ಸಣ್ಣಪುಟ್ಟ ಕಟ್ಟಡಗಳಿದ್ದು, ವಿವಾದ ಆಗುವಂತಹದ್ದು ಯಾವುದೂ ಇಲ್ಲ. ಈಗಾಗಲೇ 17 ಧಾರ್ಮಿಕ ಕೇಂದ್ರ ಕಟ್ಟಡ ತೆರವು ಮಾಡಿದ್ರೂ ಯಾರೂ ಸಹ ವಿರೋಧಿಸಿಲ್ಲ. ತಾಲೂಕು ಕೇಂದ್ರಗಳ ಪೈಕಿ ನಾಲ್ಕು ಕಟ್ಟಡಗಳು ನಿಪ್ಪಾಣಿಯಲ್ಲಿದ್ದು ಅವುಗಳ ಸ್ಥಳಾಂತರಕ್ಕೆ ಕ್ರಮ ವಹಿಸಲಾಗುವುದು ಎಂದು ಡಿಸಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದ್ದಾರೆ.

 

 


Spread the love

About Laxminews 24x7

Check Also

ಅಕ್ರಮವಾಗಿ ನೆಲೆಸಿದ್ದ ಇಬ್ಬರು ಬಾಂಗ್ಲಾದೇಶ ಪ್ರಜೆಗಳ ಬಂಧನ

Spread the loveಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ವಿವಿಧ ಕಡೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ