ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ದಲ್ಲಿ ಬೆಂಗಳೂರು ಕಲಾಸಿಪಾಳ್ಯದ ಆರೀಫ್ ಪಾಷಾ(30) ಎಂಬಾತನನ್ನು ಇಲ್ಲಿನ ಕಲ್ಕಟ್ಟದಲ್ಲಿ ಭಾನುವಾರ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಫೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಬಂಧಿತನು ಕೂಲಿ ಕಾರ್ಮಿಕ ನಾಗಿದ್ದು, ತಿನಿಸು ನೀಡುವುದಾಗಿ ಹೇಳಿ ಪರಿಚಿತ ವ್ಯಕ್ತಿಯೊಬ್ಬರ ಮಗಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದನು. ಆತನ ಕೃತ್ಯಕ್ಕೆ ಹೆದರಿ ಬಾಲಕಿ ಓಡಿ ಬಂದಿದ್ದು, ಅದೇ ದಾರಿಯಲ್ಲಿ ಬರುತ್ತಿದ್ದ ಸಾಮಾಜಿಕ ಕಾರ್ಯಕರ್ತ ತಲಪಾಡಿಯ ಯಶು ಪಕಳ ವಿಚಾರಿಸಿದ್ದಾರೆ. ನಡೆದ ಘಟನೆಯನ್ನು ಬಾಲಕಿ ತಿಳಿಸಿದ್ದಾಳೆ. ಬಳಿಕ ಅವರು ಸ್ಥಳೀಯರ ಸಹಕಾರದಲ್ಲಿ ಆರೋಪಿಯನ್ನು ಸೆರೆ ಹಿಡಿದು ಉಳ್ಳಾಲ ಪೊಲೀಸರಿಗೆ ನೀಡಿದ್ದಾರೆ.
Laxmi News 24×7