ಬೆಂಗಳೂರು: ಇಂದಿನಿಂದ 10 ದಿನಗಳ ಕಾಲ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದೆ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಬೊಮ್ಮಾಯಿ ಅವರಿಗೆ ಇದು ಮೊದಲ ಅಧಿವೇಶನವಾಗಿದೆ.
ಅಧಿವೇಶನದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿಳಂಬ, ವರ್ಗಾವಣೆ ದಂಧೆ ಕುರಿತು ಪ್ರಸ್ತಾವಿಸುವುದಾಗಿ ವಿಪಕ್ಷ ಕಾಂಗ್ರೆಸ್ ಘೋಷಿಸಿದ್ದು, ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ಮಧ್ಯೆ ವಾಕ್ಸಮರ, ಆರೋಪ – ಪ್ರತ್ಯಾರೋಪ, ಬಿಸಿ ಬಿಸಿ ಚರ್ಚೆಗೆ ವೇದಿಕೆಯಾಗಲಿದೆ.
6 ತಿಂಗಳ ಬಳಿಕ ಅಧಿವೇಶನ ನಡೆ ಯುತ್ತಿದ್ದು, ಕೊರೊನಾದಿಂದಾಗಿ ಸಾಕಷ್ಟು ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.ಅಧಿವೇಶನದಲ್ಲಿ ಕೊಳಚೆ ಪ್ರದೇಶಗಳ ಭೂಕಬಳಿಕೆ ವಿರುದ್ಧ ಕ್ರಮಕ್ಕೆ ತಿದ್ದುಪಡಿ ಮಸೂದೆ, ಬಿಡಬ್ಲ್ಯುಎಸ್‌ಎಸ್‌ಬಿ ತಿದ್ದುಪಡಿ, ಪೌರಸಭೆ, ಶಿಕ್ಷಕರ ವರ್ಗಾವಣೆ ನಿಯಮ ಮಸೂದೆ ಮತ್ತು 4 ಅಧ್ಯಾದೇಶ ಸಹಿತ 18 ಮಸೂದೆಗಳ ಮಂಡನೆಗೆ ಸರಕಾರ ಸಿದ್ಧವಾಗಿದೆ.
Laxmi News 24×7